July 6, 2026

ರಸ್ತೆ ಸಾರಿಗೆ ಬಸ್-ಆಟೊ ರಿಕ್ಷಾ ನಡುವೆ ಭೀಕರ ರಸ್ತೆ ಅಪಘಾತ: 9 ಮಂದಿ ಕಾರ್ಮಿಕರು ಸಾವು

0
image_editor_output_image-1240618835-1660109869158.jpg

ಕೋಲ್ಕತ್ತಾ : ರಾಜ್ಯ ರಸ್ತೆ ಸಾರಿಗೆ ಬಸ್ ಮತ್ತು ಆಟೊ ರಿಕ್ಷಾ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಮಂದಿ ಮಹಿಳಾ ಕಾರ್ಮಿಕರು ಸೇರಿದಂತೆ ಒಟ್ಟು 9 ಮಂದಿ ಸಾವನ್ನಪ್ಪಿದ ಘಟನೆ ಪಶ್ಚಿಮ ಬಂಗಾಳದ ಬಿರ್ಭೂಮ್ ನಲ್ಲಿ ನಡೆದಿದೆ.

ಬಿರ್ಭೂಮ್ ಜಿಲ್ಲೆಯ ಮಲ್ಲಾರ್‌ಪುರ ಸಮೀಪದ ರಾಮ್‌ಪುರ್ಹಾತ್ ರಾಷ್ಟ್ರೀಯ ಹೆದ್ದಾರಿ 60ರಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ. ಎಂಟು ಮಹಿಳಾ ಕೃಷಿ ಕಾರ್ಮಿಕರು ಮತ್ತು ರಿಕ್ಷಾ ಚಾಲಕ ಸೇರಿ ಒಟ್ಟು ಒಂಬತ್ತು ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!