ಭೀಕರ ಕಾರು ಅಪಘಾತ: ದಕ್ಷಿಣ ಆಫ್ರಿಕಾದ ಕ್ರಿಕೆಟ್ ಅಂಪೈರ್ ರೂಡಿ ಕೊರ್ಜೆನ್ ಮೃತ್ಯು
ಕೇಪ್ ಟೌನ್: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟ್ ಅಂಪೈರ್ ರೂಡಿ ಕೊರ್ಜೆನ್ ಅವರು ಭೀಕರ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ. ವಿಶ್ವ ಕ್ರಿಕೆಟ್ನ ಅತ್ಯಂತ ಜನಪ್ರಿಯ ಮುಖಗಳಲ್ಲಿ ಒಬ್ಬರಾಗಿದ್ದ ರೂಡಿ ಕೊರ್ಜೆನ್ ಅವರ ನಿಧನದ ಸುದ್ದಿಯನ್ನು ಪುತ್ರ ಖಚಿತ ಪಡಿಸಿದ್ದಾರೆ.
ನೆಲ್ಸನ್ ಮಂಡೇಲಾ ಬೇ ಡೆಸ್ಪಾಚ್ ನಿವಾಸಿ 73 ವರ್ಷದ ಕೊರ್ಜೆನ್ ಅವರು ಗಾಲ್ಫ್ ಆಟದ ನಂತರ ಕೇಪ್ ಟೌನ್ನಿಂದ ಮನೆಗೆ ಹಿಂದಿರುಗುತ್ತಿದ್ದರು. ಅವರು ಸೋಮವಾರವೇ ಹಿಂದೆ ಬರಬೇಕಿತ್ತು. ಆದರೆ ಮತ್ತಷ್ಟು ಆಟ ಆಡಿದ್ದರಿಂದ ಮಂಗಳವಾರ ಬೆಳಗ್ಗೆ ಮರಳಿದರು. ಈ ವೇಳೆ ಕಾರು ಅಪಘಾತವಾಗಿದೆ. ರೂಡಿ ಜೊತೆಗೆ ಕಾರಿನಲ್ಲಿದ್ದ ಮೂವರು ಸ್ನೇಹಿತರು ಕೂಡಾ ನಿಧನರಾಗಿದ್ದಾರೆ ಎಂದು ವರದಿ ಹೇಳಿದೆ.




