ಬಂಟ್ವಾಳ: ನೇತ್ರಾವತಿ ನದಿಗೆ ಬಿದ್ದು ಯುವಕ ನಾಪತ್ತೆ
ಬಂಟ್ವಾಳ: ಕೆಲಸ ಮುಗಿಸಿ ಕೈ ಕಾಲು ತೊಳೆಯಲು ನೇತ್ರಾವತಿ ನದಿಗೆ ಇಳಿದ ವ್ಯಕ್ತಿಯೋರ್ವ ಆಯತಪ್ಪಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾದ ಘಟನೆ ಬಿ.ಸಿ.ರೋಡು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಛತ್ತೀಸ್ ಘಡ್ ರಾಜ್ಯ ದ ಬಸ್ತರ ಜಿಲ್ಲೆಯ ಬಡ್ಡೆಬಂದಮ ಗ್ರಾಮದ ಜಮ್ಮವಾಡ ನಿವಾಸಿ ಆನಂದ ಕಶ್ಯಪ (28) ಕಾಣೆಯಾದ ವ್ಯಕ್ತಿ.
ಒಂದು ತಿಂಗಳಿನಿಂದ ಬಂಟ್ವಾಳ ರೈಲ್ವೆ ಸ್ಟೇಷನ್ ನ ಪಕ್ಕದಲ್ಲಿ ರೈಲ್ವೆ ವಿದ್ಯುದೀಕರಣ ಕಾಮಗಾರಿಯನ್ನು ಮಾಡಿಕೊಂಡಿದ್ದು, ಜೊತೆಯಲ್ಲಿ ಛತ್ತೀಸ್ ಘಡ್ ಮೂಲದ ಇತರ ಕೆಲಸಗಾರರು ಇದ್ದರು.
ಆನಂದ ಕಶ್ಯಪ ಕೆಲಸ ಮುಗಿಸಿ ಬಳಿಕ ಅಲ್ಲೇ ಸಮೀಪ ನೇತ್ರಾವತಿ ನದಿಗೆ ಕೈಕಾಲು ತೊಳೆಯಲು ನೀರಿಗೆ ಇಳಿದ ವೇಳೆ ಆಯ ತಪ್ಪಿ ನದಿಗೆ ಬಿದ್ದು ಕಾಣೆಯಾಗಿದ್ದಾನೆ ಎಂದು ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಸಹೋದ್ಯೋಗಿಗಳು ತಿಳಿಸಿದ್ದಾರೆ.




