ವಿಟ್ಲ: ಬೆಳ್ಳಂಬೆಳಿಗ್ಗೆ ವಿಟ್ಲದ ಫುಟ್ ಪಾತ್ ನಲ್ಲಿ ಶವ ಪತ್ತೆ: ತೆರೆದ ಚರಂಡಿಗೆ ಬಿದ್ದು ಮೃತ್ಯು ಶಂಕೆ
ವಿಟ್ಲ: ಅಪರಿಚಿತ ಶವವೊಂದು ಪತ್ತೆಯಾದ ಘಟನೆ ವಿಟ್ಲ ದಲ್ಲಿ ನಡೆದಿದೆ.
ವಿಟ್ಲ ಕಾಸರಗೋಡು ಮುಖ್ಯ ರಸ್ತೆಯ ನಾಲ್ಕು ಮಾರ್ಗ ಬಳಿ ಅಪರಿಚಿತ ಶವವೊಂದು ಪತ್ತೆಯಾಗಿದೆ.
ರಸ್ತೆಯ ಫುಟ್ ಪಾತ್ ನ ಸ್ಲಾಬ್ ತೆರೆದ ಸ್ಥಿತಿಯಲ್ಲಿದ್ದು ಕುಡಿದ ಮತ್ತಿನಲ್ಲಿ ಅದಕ್ಕೆ ಬಿದ್ದಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಮೃತರನ್ನು ಚಂದಳಿಕೆ ನಿವಾಸಿ ಪಕ್ರು ಎಂದು ಗುರುತಿಸಲಾಗಿದೆ.
ಸದ್ಯ ವಿಟ್ಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.





