ಕೇರಳ: ಮಲಯಾಳಂ ನಟನ ಮೃತದೇಹ ಪತ್ತೆ
ಕೇರಳ: ಮಲಯಾಳಂ ನಟ ಶರತ್ ಚಂದ್ರನ್ ಶವವಾಗಿ ಪತ್ತೆಯಾಗಿದ್ದು, ಅವರಿಗೆ 37 ವರ್ಷ ವಯಸ್ಸಾಗಿತ್ತು, ಆದರೆ ನಟನ ಸಾವಿಗೆ ನಿಖರ ಕಾರಣವಿನ್ನೂ ತಿಳಿದುಬಂದಿಲ್ಲ.
ಶರತ್ ತಮ್ಮ ಚಿತ್ರ ಅಂಗಮಾಲಿ ಡೈರೀಸ್ ಮೂಲಕ ಪ್ರಸಿದ್ಧಿ ಪಡೆದಿದ್ದು, ಇತರ ಜನಪ್ರಿಯ ಚಿತ್ರಗಳಲ್ಲಿ ಕೂಡೆ, ಒರು ಮೆಕ್ಸಿಕನ್ ಅಪರಾತ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕೊಚ್ಚಿ ಮೂಲದವರಾದ ಶರತ್, ಈ ಹಿಂದೆ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು. ಅವರು ಡಬ್ಬಿಂಗ್ ಕಲಾವಿದರಾಗಿ ಚಲನಚಿತ್ರದಲ್ಲಿಯೂ ಕೆಲಸ ಮಾಡಿದರು. ಅನೀಸ್ಯ ಚಿತ್ರದ ಮೂಲಕ ಚಂದ್ರನ್ ಮಲಯಾಳಂ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದರು.