ಬ್ರೆಜಿಲ್‌ನಲ್ಲಿ ವಿಮಾನ ಅಪಘಾತ:
ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಗಾಯಕಿ ಮೃತ್ಯು
ಬ್ರಾಸಿಲಿಯಾ: ಶುಕ್ರವಾರ ಬ್ರೆಜಿಲ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಗಾಯಕಿ ಮರಿಲಿಯಾ ಮೆಂಡೊಂಕಾ ಅವರು ಮೃತಪಟ್ಟಿದ್ದಾರೆ.
ಬ್ರೆಜಿಲ್‌ನ ಮಿನಾಸ್ ಗೆರೈಸ್ ಎಂಬ ಪ್ರಾಂತ್ಯದಲ್ಲಿ ಲಘು ವಿಮಾನ ಪತನಗೊಂಡು ಈ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ ಇಬ್ಬರು ಪೈಲೆಟ್ ಸೇರಿದಂತೆ ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೆಂಡೊಂಕಾ ಅವರು ಮಿನಾಸ್‌ಗೆ ಸಂಗೀತ ಕಾರ್ಯಕ್ರಮ ನೀಡಲು ತೆರಳುತ್ತಿದ್ದರು.
‘ಸಂಬಂಧಿಸಿದ ಪ್ರಾಧಿಕಾರದಿಂದ ಘಟನೆಯ ತನಿಖೆಯನ್ನು ನಡೆಸಲು ಆದೇಶಿಸದಲಾಗಿದೆ’ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಇವಾನ್ ಲೋಪ್ಸ್ ತಿಳಿಸಿದ್ದಾರೆ.
‘ಘಟನೆಗೆ ನಿರ್ಧಿಷ್ಟ ಕಾರಣ ಏನೆಂಬುದು ಪತ್ತೆಯಾಗಿಲ್ಲ. ಆದರೆ, ಟವರ್ ಒಂದಕ್ಕೆ ವಿಮಾನದ ರೆಕ್ಕೆ ತಾಗಿದ್ದರಿಂದ ಅದು ಪತನಗೊಂಡು ಜಲಪಾತವೊಂದರಲ್ಲಿ ಬಿದ್ದು ಅಪಘಾತ ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ’ ಎಂದು ಪತ್ರಿಕಾಗೋಷ್ಟಿಯಲ್ಲಿ ಇವಾನ್ ಲೂಪ್ಸ್ ತಿಳಿಸಿದ್ದಾರೆ.





