ಸುಳ್ಯ: ಹಿಂದು ಸಂಘಟನೆ ಮುಖಂಡನ ಇರಿದು ಹತ್ಯೆ
ಸುಳ್ಯ: ಇಲ್ಲಿನ ತಾಲ್ಲೂಕಿನ ಬೆಳ್ಳಾರೆಯಲ್ಲಿ ಹಿಂದು ಸಂಘಟನೆಗಳ ಮುಖಂಡ, ಬೆಳ್ಳಾರೆ ಅಕ್ಷಯ ಕೋಳಿ ಅಂಗಡಿಯ ಪ್ರವೀಣ್ ನೆಟ್ಟಾರು(32) ಎಂಬವನ್ನು ಮಂಗಳವಾರ ರಾತ್ರಿ 9 ಗಂಟೆಗೆ ಕೊಲೆ ಮಾಡಲಾದ ಘಟನೆ ನಡೆದಿದೆ.

ಬೈಕ್ ನಲ್ಲಿ ಬಂದ ತಂಡ ತಲವಾರಿನಿಂದ ಪ್ರವೀಣ್ ಅವರ ತಲೆಗೆ ಕಡಿದು ಪರಾರಿ ಆಗಿದೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಅವರು ಮೃತಪಟ್ಟಿದ್ದಾರೆ. ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೈಕ್ ನಲ್ಲಿ ಬಂದ ತಂಡದ ಬೈಕ್ ನಂಬರ್ ಪೊಲೀಸ್ ರಿಗೆ ಲಭ್ಯವಾಗಿದೆ. ಕಳಂಜದಲ್ಲಿ ಇತ್ತಿಚೆಗೆ ಮಸೂದ್ ಎಂಬಾತನನ್ನು ಹತ್ಯೆ ಮಾಡಲಾಗಿತ್ತು. ಬೆಳ್ಳಾರೆ ಪೇಟೆ ಸಹಿತ ಈ ಭಾಗದಲ್ಲಿ ಪೋಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.





