ದಾಂತೆವಾಡ: ಭದ್ರತಾ ಪಡೆ, ನಕ್ಸಲರ ನಡುವೆ ಗುಂಡಿನ ಚಕಮಕಿ:
ನಕ್ಸಲ್ ನಾಯಕನ ಹತ್ಯೆ
ದಾಂತೆವಾಡ: ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕನನ್ನು ಹತ್ಯೆ ಮಾಡಲಾಗಿದೆ. ಈ ಘಟನೆಯು ಛತ್ತೀಸ್ ಗಢ್ ರಾಜ್ಯದ ದಾಂತೆವಾಡ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಗೀಡಂ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಸಂಜೆ 4 ಗಂಟೆ ಸುಮಾರಿಗೆ ಪೊಲೀಸರ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ತಂಡವು ಮಾವೋವಾದಿಗಳ ಗುಂಪಿಗೆ ನುಗ್ಗಿದಾಗ ಎನ್‌ಕೌಂಟರ್ ನಡೆಯಿತು.
ಪ್ಲಟೂನ್ ನಂ 16 ಸೆಕ್ಷನ್ ಕಮಾಂಡರ್ ಆಗಿದ್ದ ರಾಮ್ಸು ಕೊರ್ರಾಮ್ ನನ್ನು ಹತ್ಯೆ ಮಾಡಲಾಗಿದೆ. ಈತನ ತಲೆಗೆ ಐದು ಲಕ್ಷ ರೂ. ಇನಾಮು ಘೋಷಿಸಲಾಗಿತ್ತು. ಘರ್ಷಣೆಯ ನಂತರ, ಡಿಆರ್‌ಜಿ ತಂಡವು ಮಾವೋವಾದಿಯ ಶವವನ್ನು ವಶಪಡಿಸಿಕೊಂಡಿದೆ.





