ಪೆರುವಾಯಿ: ಗ್ರಾಮಒನ್ ನಾಗರಿಕ ಸೇವಾ ಕೇಂದ್ರ ಉದ್ಘಾಟನೆ
ವಿಟ್ಲ: ರಾಜ್ಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ಒಂದಾದ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಪೆರುವಾಯಿ ಘಟಕ ಶುಭಾರಂಭಗೊಂಡಿತು.






ಫಾತಿಮಾ ಮಾತೆಯ ದೇವಾಲಯ ಮುಚ್ಚಿರಪದವು ಇದರ ಧರ್ಮಗುರುಗಳಾದ ವಿಶಾಲ್ ಮೋನಿಸ್ ರವರು ದೀಪ ಬೆಳಗಿಸಿ ಚಾಲನೆಯನ್ನು ನೀಡಿದರು. ಈ ಕೇಂದ್ರದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಹಲವಾರು ಸೌಲಭ್ಯಗಳನ್ನು ಒಂದೇ ಸೂರಿನಡಿಗೆ ತಂದು ಪ್ರತಿಯೊಬ್ಬರಿಗೂ ಅತೀ ಸುಲಭದಲ್ಲಿ ತಲುಪುವಂತೆ ಮಾಡಲು ಈ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಗಳನ್ನು ರೂಪಿಸಲಾಗಿದೆ ಎಂದರು.
ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಬಾಲಕೃಷ್ಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಅಧಿಕಾರಿ ಅಶೋಕ ಎನ್. ಜಿ ಶುಭ ಹಾರೈಸಿದರು. ಪೆರುವಾಯಿ ಗ್ರಾಮ ಕರಣಿಕ ಪ್ರಶಾಂತ್ ಟಿ. ಎಸ್, ಪೆರುವಾಯಿ ಗ್ರಾ.ಪಂ ಸದಸ್ಯೆರಾದ ಲಲಿತ, ಎಮ್. ರಶ್ಮಿ, ರಾಜೇಂದ್ರ ರೈ ಉಪಸ್ಥಿತರಿದ್ದರು.
ಪೆರುವಾಯಿ ಗ್ರಾಮಒನ್ ನಾಗರಿಕ ಸೇವಾ ಕೇಂದ್ರ ವೈಲೆಟ್ ಕುವೆಲ್ಲೊ ಸ್ವಾಗತಿಸಿದರು. ಸಂತೋಷ್ ಮೊಂತೇರೊ, ಮುರುವ ನಿರೂಪಿಸಿದರು.




