March 26, 2026

ಕಲ್ಲಡ್ಕ: ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಆಹಾರ ಮೇಳ

0
image_editor_output_image1228346554-1658595733949

ಕಲ್ಲಡ್ಕ:  ಅನುಗ್ರಹ ಮಹಿಳಾ ಪದವಿ ಕಾಲೇಜು, ಕಲ್ಲಡ್ಕದಲ್ಲಿ ಆಹಾರ ಮೇಳವನ್ನು ಆಯೋಜಿಸಲಾಯಿತು. ವಿದ್ಯಾರ್ಥಿನಿಯರು ಆರು  ಸ್ಟಾಲ್ ಗಳಲ್ಲಾಗಿ ಸಜ್ಜುಗೊಳಿಸಿದ ನಾನಾ ರೀತಿಯ ಸ್ವಾದಿಷ್ಟ ಆಹಾರ ಪದಾರ್ಥಗಳು ಅತಿಥಿಗಳು ಹಾಗು ಸಂದರ್ಶಕರ ಮೆಚ್ಚುಗೆಗೆ ಪಾತ್ರವಾಯಿತು. ವಿದ್ಯಾರ್ಥಿನಿಯರೇ ಪಾಕ ಮಾಡಿದ ತಿಂಡಿ ತಿನಿಸುಗಳನ್ನು ಖರೀದಿಸಿ ಸವಿಯುವ ಸೌಕರ್ಯವನ್ನು ಏರ್ಪಡಿಸಲಾಗಿತ್ತು. ಕಡಿಮೆ ಖರ್ಚಿನಲ್ಲಿ ಶುಚಿ ಮತ್ತು ರುಚಿಕರವಾದ ಆಹಾರ ಪಾನೀಯಗಳನ್ನು ಹೇಗೆ ತಯಾರಿಸಬಹುದು ಎಂಬುದಕ್ಕೆ ಮೇಳವು ಸಾಕ್ಷಿಯಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉದ್ಯಮಿ ಶ್ರೀಯುತ ಮುಹಮ್ಮದ್ ಇಬ್ರಾಹಿಂ, ಅಲ್ಐನ್ . ಯು ಏ ಈ ಮೇಳವನ್ನು ಉದ್ಘಾಟಿಸಿ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು , ಪ್ರಾಂಶುಪಾಲರುಗಳು, ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಸಕ್ರಿಯವಾಗಿ ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!