March 26, 2026

ನಂದನವನ ಲಾಡ್ಜ್ ನಲ್ಲಿ ಯುವತಿಯ ಜೊತೆ ಸಿಕ್ಕಿಬಿದ್ದ ಅನ್ಯಕೋಮಿನ ಯುವಕ: ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿದ ಸಂಘಪರಿವಾರದ ಕಾರ್ಯಕರ್ತರು

0
image_editor_output_image-1724047826-1658490486383.jpg

ಉಪ್ಪುಂದ:  ಬೈಂದೂರು ತಾಲೂಕಿನ ಉಪ್ಪುಂದ ನಂದನವನ ವಸತಿ ಗೃಹಕ್ಕೆ ಭಿನ್ನಮತೀಯ ಜೋಡಿಗಳು ಬಂದ ವಿಷಯ ತಿಳಿದು ಸಂಘಪರಿವಾರದ ಕಾರ್ಯಕರ್ತರು ನೀಡಿದ ಮಾಹಿತಿಯ ಮೇರೆಗೆ ಬೈಂದೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರನ್ನೂ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

ಉಳ್ಳಾಲದ ಉಳ್ಳಾಲ ಬೈಲು ನಿವಾಸಿ ಅಮೀರ್ ಅಲಿ(45), ಉಳ್ಳಾಲದ 28 ವರ್ಷದ ಯುವತಿಯೊಂದಿಗೆ ಆಗಮಿಸಿದ್ದರು ಎಂದು ಮಾಹಿತಿ ತಿಳಿದುಬಂದಿದೆ.

ಅಮೀರ್ ಅಲಿ ಗುಜರಿ ವ್ಯಾಪಾರಿಯಾಗಿದ್ದು, ದ.ಕ ಜಿಲ್ಲೆಯ ತೊಕ್ಕುಟ್ಟುವಿನಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿದ್ದಾನೆ. ಯುವತಿ ಆತನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಆಕೆಯ ಒಪ್ಪಿಗೆಯಿಂದಲೇ ಲಾಡ್ಜ್ ಗೆ ಕರೆತಂದಿರುವುದಾಗಿ ತಿಳಿದುಬಂದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!