May 14, 2026

ಐಸಿಸಿ ಟಿ-20 ವಿಶ್ವಕಪ್:
ಸ್ಕಾಟ್ಲೆಂಡ್ ವಿರುದ್ಧ ಭಾರತಕ್ಕೆ 8 ವಿಕೆಟ್ ಗಳ ಜಯ

0
download-1.jpeg

ದುಬೈ: ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಭಾರತ 8 ವಿಕೆಟ್ ಗಳ ಜಯ ಸಾದಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಸ್ಕಾಟ್ಲೆಂಡ್ ತಂಡವು ‌ನಿಗದಿತ 17.4 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 85 ರನ್ ಗಳನ್ನು ಪೇರಿಸಿತು. ಭಾರತದ ಬೌಲಿಂಗ್ ಮಾರಕಕ್ಕೆ ಸ್ಕಾಟ್ಲೆಂಡ್ ತಂಡದ ಆಟಗಾರರು ಬೇಗನೆ ಪೆವಿಲಿಯನ್ ಹಾದಿ ಹಿಡಿದರು.

ಸ್ಕಾಟ್ಲೆಂಡ್ ತಂಡದ ಮುನ್ಸೆ 24(19), ಕೋಟ್ಝರ್ 1(7), ಕ್ರಾಸ್ 2(9), ಬ್ಯಾರಿಂಗ್ಟನ್ 0(5), ಮ್ಯಾಕ್ಲಿಯೋಡ್ 16(28), ಲೀಸ್ಕ್ 21(12), ಕ್ರಿಸ್ ಗ್ರೇವ್ಸ್ 1(7) ಮಾರ್ಕ್ ವಾಟ್ 14(13), ಶಫಿಯಾನ್ ಶರೀಫ್ 0(1), ಇವನ್ಸ್ 0(1), ವೇಲ್ 2*(4) ರನ್ ಗಳಿಸಿದರು

ಸ್ಕಾಟ್ಲೆಂಡ್ ನೀಡಿದ 86 ರನ್ ಗಳ ಸುಲಭ ಗುರಿಯನ್ನು ಭಾರತ ತಂಡವು 6.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 8 ವಿಕೆಟ್ ಗಳ ಜಯವನ್ನು ಸಾಧಿಸಿತು. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಕೆ. ಎಲ್ ರಾಹುಲ್ ಮೊದಲ ವಿಕೆಟ್ ಜೊತೆಯಾಟಕ್ಕೆ 70 ರನ್ ಗಳನ್ನು ಸೇರಿಸುವುದರ ಮೂಲಕ ಜಯದ ಹಾದಿ ಸುಗಮಗೊಳಿಸಿದರು.

ಭಾರತ ತಂಡದ, ಕೆ ಎಲ್ ರಾಹುಲ್ 50(19), ರೋಹಿತ್ ಶರ್ಮಾ 30(16), ವಿರಾಟ್ ಕೊಹ್ಲಿ 2(2), ಸೂರ್ಯಕುಮಾರ್ ಯಾದವ್ 6(2) ರನ್ ಗಳಿಸಿದರು.

ಭಾರತದ ಗೆಲುವಿಗೆ ಬೌಲರ್ ಗಳಾದ ಜಡೇಜ ಮತ್ತು ಮೊಹಮ್ಮದ್ ಶಮಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ 3, ರವೀಂದ್ರ ಜಡೇಜ 3, ರವಿಚಂದ್ರನ್ ಅಶ್ವಿನ್ 1, ಜಸ್ಪ್ರಿತ್ ಬುಮ್ರ 2 ವಿಕೆಟ್ ಪಡೆದು ಮಿಂಚಿದರು.

Leave a Reply

Your email address will not be published. Required fields are marked *

error: Content is protected !!