February 2, 2026

ಆಕಸ್ಮಿಕ ಗ್ರೆನೇಡ್ ಸ್ಫೋಟ: ಸೇನಾಪಡೆಯ ಕ್ಯಾಪ್ಟನ್ ಸಹಿತ ಇಬ್ಬರು ಅಧಿಕಾರಿಗಳು ಮೃತ್ಯು

0
image_editor_output_image1571009135-1658121991261.jpg

ಬೆಂಗಳೂರು: ಜಮ್ಮು–ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಪೂಂಚ್ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಆಕಸ್ಮಿಕ ಗ್ರೆನೇಡ್ ಸ್ಫೋಟದಲ್ಲಿ ಸೇನಾಪಡೆಯ ಕ್ಯಾಪ್ಟನ್ ಸಹಿತ ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಕ್ಯಾಪ್ಟನ್ ಆನಂದ್ ಮತ್ತು ನೇಬ್ ಸುಬೇದಾರ್ ಭಗವಾನ್ ಸಿಂಗ್ ಎಂದು ಗುರುತಿಸಲಾಗಿದೆ.

ಈ ಬಗ್ಗೆ ಸೇನಾ ವಕ್ತಾರ ಲೆ. ಕರ್ನಲ್ ದೇವೆಂದರ್ ಆನಂದ್ ಅವರು ಮಾಹಿತಿ ನೀಡಿದ್ದು, ಇಬ್ಬರೂ ಅಧಿಕಾರಿಗಳು ಗಡಿನಿಯಂತ್ರಣ ರೇಖೆಯ ಮೀಂಧರ್ ಸೆಕ್ಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಅವಘಡ ಸಂಭವಿಸಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!