February 2, 2026

ವಿಟ್ಲ: ಕಿರು ತೋಡಿಗೆ ಹಾಕಿರುವ ಸಂಕ ಮುರಿತ: ವ್ಯಕ್ತಿ ಅಪಾಯದಿಂದ ಪಾರು

0
IMG-20220716-WA0000.jpg

ವಿಟ್ಲ: ಅಳಿಕೆ ಗ್ರಾಮದ ವಾಟೆಮಾರು ಎಂಬಲ್ಲಿ ಕಿರು ತೋಡಿಗೆ ಹಾಕಿರುವ ಕಾಲು ಸಂಕ ಮುರಿತಗೊಂಡು ವ್ಯಕ್ತಿಯೊರ್ವರು ಅಪಾಯದಿಂದ ಪಾರಾದ ಘಟನೆ ನಡೆದಿದೆ.

ಅಳಿಕೆ, ಮುಳಿಯ, ಮಿತ್ತಳಿಕೆ ಭಾಗದಿಂದ ಬರುವ ಸಾರ್ವಜನಿಕರಿಗೆ ಪಂಚಾಯತ್ ಕಾಲು ದಾರಿಯಾದ ಈ ರಸ್ತೆಯ ಮೂಲಕ ಅಳಿಕೆ ಸತ್ಯಸಾಯಿ ವಿಹಾರವನ್ನು ಸಂಪರ್ಕಿಸಲು ಅನುಕೂಲವಾದ ಕಾಲು ದಾರಿಯಾಗಿದೆ.

ಸಂಕ ಮುರಿದು ಬಿದ್ದ ಸಂದರ್ಭ ಅಪಾಯದಿಂದ ಪಾರಾದ ಮೂಸೆ ಬ್ಯಾರಿ ಎಂಬವರು ಆ ಕ್ಷಣದ ಬಗ್ಗೆ ತಿಳಿಸಿದ್ದು, ಕಾಲು ಸಂಕದ ಮೂಲಕ ತೆರಳುತ್ತಿದ್ದ ವೇಳೆ ಹಠಾತ್ ಆಗಿ ಸಂಕ ಮುರಿದು ಬಿದ್ದಿದ್ದು, ಈ ವೇಳೆ ಹಳ್ಳಕ್ಕೆ ಬಿದ್ದಿದ್ದು, ಹಳ್ಳದಲ್ಲಿ ನೀರಿನ ಹರಿವು ಕಡಿಮೆ ಇದ್ದ ಕಾರಣ ನಾನು ಬದುಕುಳಿದ್ದೇನೆ ಎಂದಿದ್ದಾರೆ.

ಈ ಭಾಗದವರಿಗೆ ಪೇಟೆಗೆ ಸಂಪರ್ಕಿಸಲು ಅನುಕೂಲವಾದ ಕಾಲು ದಾರಿ ಇದಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಮತ್ತೆ ಸಂಕ ಅಳವಡಿಸುವ ಮೂಲಕ ರಸ್ತೆ ದುರಸ್ತಿ ಮಾಡಿಕೊಡುವಂತೆ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!