ವಿದ್ಯಾನಗರ- ಮುಡಿಪು ರಾಜ್ಯ ಹೆದ್ದಾರಿಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಆರಂಭಿಸಬೇಕು: ಜಯರಾಮ ಬಲ್ಲಂಗುಡೆಲ್
ಮಂಜೇಶ್ವರ: ಜಿಲ್ಲೆಯ ಗಡಿ ಪ್ರದೇಶವಾದ ಪುತ್ತಿಗೆ, ಕುಂಬಳೆ,ಪೈವಳಿಕೆ, ಮೀಂಜ , ವಕಾ೯ಡಿ ಪಂ ವ್ಯಾಪ್ತಿಯ ಮೂಲಕ ಹಾದುಹೋಗುವ ವಿದ್ಯಾನಗರ- ಮುಡಿಪು ರಾಜ್ಯ ಹೆದ್ದಾರಿಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಆರಂಭಿಸಲು ಬೇಕಾಗಿ ಕ್ರಮ ಕೈಗೊಳ್ಳಬೇಕೆಂದೂ ಸಿಪಿಐ ಮಂಜೇಶ್ವರ ಮಂಡಲ ಕಾಯ೯ದಶಿ೯ಯಾಗಿ ಮರು ಅಯ್ಕೆಯಾದ ಜಯರಾಮ ಬಲ್ಲoಗುಡೇಲ್ ಆಗ್ರಹಿಸಿದ್ದಾರೆ.
ಪೈವಳಿಕೆಯಲ್ಲಿ ನಡೆದ ದ್ವಿದಿನ ನಡೆದ ಮಂಡಲ ಸಮ್ಮೆಳನದಲ್ಲಿ ಇವರನ್ನು ಸಿಪಿಐ ಮಂಜೇಶ್ವರ ಮಂಡಲ ಕಾಯ೯ದಶಿ೯ಯಾಗಿ ಆಯ್ಕೆ ಮಾಡಲಾಯಿತು.ಸಮ್ಮೆಳನವು 2 ಪ್ರಧಾನ ನಿಣ೯ಯವನ್ನು ಮಂಡಿಸಿದೆ. ಅದರಲ್ಲಿ ಜಿಲ್ಲೆಯ ವಿದ್ಯಾಥಿ೯ಗಳಿಗೆ ಕನಾ೯ಟಕ ಸಾರಿಗೆ ಬಸ್‌ಗಳಲ್ಲಿರುವ ರಿಯಾಯತಿ ಪಾಸ್ ರೂಪದಲ್ಲಿ ಕೇರಳ ರಾಜ್ಯ ಸಾರಿಗೆ ಬಸ್‌ಗಳಲ್ಲೂ ಜಿಲ್ಲೆಯ ವಿದ್ಯಾಥಿ೯ಗಳಿಗೆ ರಿಯಾಯತಿ ದರದ ಪಾಸ್ ನೀಡಬೇಕೆಂದೂ ನಿಣ೯ಯ ಮಂಡಿಸಲಾಗಿದೆ. ಜಯರಾಮ ಬಲ್ಲಂಗುಡೆಲ್ ಜನ ಮೆಚ್ಚಿನ ನಾಯಕರಾಗಿದ್ದು ಇದೀಗ ಕಳೆದ ಒಂದು ವಷ೯ಗಳಿಂದ ಮೀಂಜ ಪಂಚಾಯತ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ




