ಪೈವಳಿಕೆ ಬಾಳಿಗೆ ಅಜೀಜ್ ಹತ್ಯೆ ಪ್ರಕರಣ ವಿಚಾರಣೆ ಪೂರ್ಣ: ತೀರ್ಪು ಕಾಯ್ದಿರಿಸಿದ ನ್ಯಾಯಾಲಯ
ಮಂಜೇಶ್ವರ: ಪೈವಳಿಕೆ ಬಾಯಿಕಟ್ಟೆ ನಿವಾಸಿ ಬಾಳಿಗೆ ಅಜೀಜ್ (40 )ಹಲ್ಲೆ ನಡೆಸಿ ಕೊಲೆಗೈದ ಪ್ರಕರಣದ ತನಿಖೆ ಪೂಣ೯ಗೊಂಡಿದೆ. ಪ್ರಕರಣ ತನಿಖೆ ಎರಡು ವಷ೯ ಹಿಂದೆಯೆ ಪೂರ್ಣಗೊಂಡಿತ್ತು. ಆದರೆ ಕೋವಿಡ್ ಹಿನ್ನಲೆಯಲ್ಲಿ ಇದು ವಿಳಂಭಗೊಂಡಿತ್ತು.
ಪ್ರಕರಣದಲ್ಲಿ ಪೈವಳಿಕೆಯ ಅಬ್ದುಲ್ ಹಮೀದ್ ಯಾನೆ ಅಮ್ಮಿ (35) ಶಾಪಿಯಾನೆ ಚೊಟು ಶಾಪಿ (32) ಮಡಿಕೇರಿ ನಿವಾಸಿ ಶಹುಕತ್ತಾಲಿ (33) ಬಂಟ್ವಾಳ ನಿವಾಸಿ ಮುಹಮ್ಮದ್ ರಫೀಕ್ (28) ಕಯರ್ ಕಟ್ಟೆ ನಿವಾಸಿ ಅನ್ಸಾದ್ (34) ಪೈವಳಿಕೆಯ ಮುಹಮ್ಮದ್ ರಹೀಸ್ (27) ಪೈವಳಿಕೆಯ ಜಯರಾಂ (34) ಪೈವಳಿಕೆಯ ಸಿಯಾ (40) ಶಾಪಿ, ನೂರ್ ಶಾ, ಅಬ್ದುಲ್ ಶಿಹಾಬ್ ಎಂಬವರು ಈ ಪ್ರಕರಣದ ಆರೋಪಿಗಳಾಗಿದ್ದಾರೆ.
2014ರಂದು ಜನವರಿ 25ರಂದು ಬಾಳಿಗೆ ಅಜೀಜ್ ಸಂಚರಿಸಿದ ಕಾರಿಗೆ ಆರೋಪಿಗಳ ಕಾರನ್ನು ಡಿಕ್ಕಿ ಹೊಡೆಸಿ ನಿಲ್ಲಿಸಿದ್ದು ಕಾರಿನಿಂದ ಇಳಿದು ಓಡಿದ ಅಜೀಜನ್ನು ಬೆನ್ನಟ್ಟಿ ಕತ್ತನ್ನು ಕಡಿದು ಕೊಲೆಗೈಯಲಾಗಿತ್ತು. ಯಾರನ್ನು ಆಕ್ರಮಿಸಿರುವ ದ್ವೇಷವೇ ಕೊಲೆಗೆ ಕಾರಣವಾಗಿತ್ತು. ಅಂದಿನ ಕುಂಬಳೆ ಸಿಐ ಸಿಬಿ ತೋಮಸ್ ರ ನೇತ್ರತ್ವದ ತಂಡ ಆರೋಪಿಗಳನ್ನು ಬಂಧಿಸಿತ್ತು. ಇದೀಗ ಆರೋಪಿಗಳ ವಿಚಾರಣೆ ಪೂಣ೯ಗೊಂಡಿದೆ.




