March 19, 2026

ಮಂಗಳೂರು: ಪಟಾಕಿ ವಿಷಯದಲ್ಲಿ ಜಗಳ, ಕೊಲೆಯಲ್ಲಿ ಅಂತ್ಯ:
ತಂದೆ-ಮಗನ ಬಂಧನ

0
Screenshot_2021-11-05-14-26-03-45_680d03679600f7af0b4c700c6b270fe7.jpg

ಮಂಗಳೂರು: ಪಟಾಕಿ ಹೊಡೆಯುವ ವಿಷಯದಲ್ಲಿ ಜಗಳ ಉಂಟಾಗಿ ವ್ಯಕ್ತಿಯೋರ್ವನ ಹತ್ಯೆಯಲ್ಲಿ ಅದು ದುರಂತ ಅಂತ್ಯ ಕಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತಂದೆ-ಮಗನನ್ನು ಬಂಧಿಸಿದ್ದಾರೆ. ದೀಪಾವಳಿಯ ದಿನದಂದು ಬುಧವಾರ ಪಟಾಕಿ ಹೊಡೆಯುತ್ತಿದ್ದಾಗ ತಂದೆ ಹಾಗೂ ಮಗ ವಿನಾಯಕ್ ಕಾಮತ್ (45) ನ್ನು ಹತ್ಯೆ ಮಾಡಿದ್ದಾರೆ ಎಂದು ಹತ್ಯೆಗೀಡಾದ ವ್ಯಕ್ತಿಯ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

ವಿನಾಯಕ್ ಕಾಮತ್ ಪತ್ನಿ ಅಮನ್ನಿ ಕಾಮತ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಾವು ವಾಸಿಸುತ್ತಿರುವ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ನಲ್ಲೇ ಇರುವ ಕೃಷ್ಣಾನಂದ ಕಿಣಿ ಎಂಬ ವ್ಯಕ್ತಿ ಆತನ ಪುತ್ರ ಅವಿನಾಶ್ ಕಿಣಿ ಜೊತೆಗೂಡಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

“5 ವರ್ಷಗಳಿಂದ ನಾನು ಈ ಕಾಂಪ್ಲೆಕ್ಸ್ ನಲ್ಲಿ ನನ್ನ ಪತಿ ವಿನಾಯಕ್ ಕಾಮತ್, ಪುತ್ರ ಉತ್ತಮ್, ಅತ್ತೆ ವಿಜಯಲಕ್ಷ್ಮಿ ಅವರೊಂದಿಗೆ ವಾಸಿಸುತ್ತಿದ್ದೇವೆ. ಕೆಲವು ದಿನಗಳ ಹಿಂದೆ ಮಂಗಳೂರು ಸಿಟಿ ಕಾರ್ಪೊರೇಷನ್ ನವರು ಕಾಂಪ್ಲೆಕ್ಸ್ ಎದುರು ಭಾಗದಲ್ಲಿದ್ದ ರಸ್ತೆಯನ್ನು ದುರಸ್ತಿ ಮಾಡಿದ್ದರು. ಈ ವೇಳೆ ಕೃಷ್ಣಾನಂದ ನನ್ನ ಪತಿಯ ಜೊತೆಗೆ ಜಗಳವಾಡಿದ್ದರು.

Leave a Reply

Your email address will not be published. Required fields are marked *

error: Content is protected !!