ಗೋವಾದ 113 ವರ್ಷದ ಹಿರಿಯಜ್ಜಿ ನಿಧನ
ಪಣಜಿ: ಗೋವಾ ರಾಜ್ಯದಲ್ಲಿಯೇ ಅತೀ ಹಿರೀಯ ವಯಸ್ಸಿನ ವ್ಯಕ್ತಿ ಎಂದೇ ಕರೆಯಲ್ಪಡುತ್ತಿದ್ದ ಕಾಮುರ್ಲಿಯಲ್ಲಿನ ಲಾರ್ಡೆಸ್ ಕಾನ್ಸೆಕಾವೊ ಲೋಬೊ (113) ರವರು ನಿಧನ ಹೊಂದಿದ್ದಾರೆ.
ಲಾರ್ಡೆಸ್ ಕಾನ್ಸೆಕಾವೊ ಅವರು 8 ಡಿಸೆಂಬರ್ 1908 ರಲ್ಲಿ ಜನಿಸಿದ್ದರು. ಗೋವಾದ ಹಿರೀಯ ವಯೋವೃದ್ಧೆ ಎಂದೇ ಪ್ರಸಿದ್ಧಿ ಪಡೆದಿದ್ದ ಕಾನ್ಸೆಕಾವೊ ಅವರು ತಮ್ಮ ಕುಟುಂಬದಲ್ಲಿ 3 ಪೀಳಿಗೆಯನ್ನು ಕಂಡಿದ್ದಾರೆ.




