November 10, 2024

ಯೂತ್ ಫ್ರೆಂಡ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಗಾಂಧಿನಗರ ಸುಳ್ಯ ವತಿಯಿಂದ ಗಣರಾಜ್ಯ ರಕ್ಷಿಸಿ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕ ಕ್ರೀಡಾಕೂಟ

0

ಸುಳ್ಯ: ಯೂತ್ ಫ್ರೆಂಡ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಗಾಂಧಿನಗರ ಸುಳ್ಯ ವತಿಯಿಂದ ಗಣರಾಜ್ಯ ರಕ್ಷಿಸಿ ಅಭಿಯಾನದ ಅಂಗವಾಗಿ ಸಾರ್ವಜನಿಕ ಕ್ರೀಡಾಕೂಟವು ಗಾಂಧಿನಗರ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೂತ್ ಫ್ರೆಂಡ್ಸ್ ಆರ್ಟ್ಸ್& ಸ್ಪೋರ್ಟ್ಸ್ ಗಾಂಧಿನಗರ ಸುಳ್ಯ ಅಧ್ಯಕ್ಷರಾದ ಅಬ್ದುಲ್ ಖಾದರ್ ಬಿ.ಕೆ. ವಹಿಸಿದ್ದರು. ಸುಳ್ಯ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್‌ಡಿಪಿಐ ಸುಳ್ಯ ನಗರಾಧ್ಯಕ್ಷರಾದ ಮಿರಾಜ್ ಸುಳ್ಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯು ಅಪಾಯದಲ್ಲಿದೆ. ಹೋರಾಟಗಾರರನ್ನು ಅಕ್ರಮವಾಗಿ ಬಂಧಿಸಲಾಗುತ್ತಿದೆ. ಸಂವಿಧಾನವನ್ನು ಉಳಿಸಲು ದೇಶದ ಪ್ರಜ್ಞಾವಂತ ನಾಗರಿಕರು ತಯಾರಾಗಬೇಕಾಗಿದೆ. ಇದಕ್ಕಾಗಿ ಸಂಘಟನೆ, ಜಾತಿ, ಧರ್ಮ ಪಂಗಡಗಳನ್ನು ಬದಿಗಿಟ್ಟು ಉತ್ತಮ ಸೌಹಾರ್ದತೆಯ ಭಾರತದ ನಿರ್ಮಾಣಕ್ಕಾಗಿ ಕಟಿಬಧ್ಧರಾಗಬೇಕಿದೆ. ಇಸ್ಲಾಮಿನಲ್ಲಿ ಆರೋಗ್ಯಕ್ಕೆ ಮಹತ್ತರವಾದ ಸ್ಥಾನವಿದೆ. ಯುವತ್ವದ ಸಮಯದಲ್ಲಿ ದುಶ್ಚಟಗಳಿಂದ ದೂರವಾಗಿ ಉತ್ತಮ ಆರೋಗ್ಯವಂತ ಶರೀರವನ್ನು ಬೆಳೆಸಿ, ಪ್ರತಿನಿತ್ಯ ಕ್ರೀಡೆ ಹಾಗೂ ದೈಹಿಕ ವ್ಯಾಯಾಮಗಳನ್ನು ನಡೆಸಿಕೊಂಡು ರೋಗಗಳಿಂದ ಮುಕ್ತವಾಗಲು ಸಾಧ್ಯ ಎಂದರು.

15 ವರ್ಷದ ಕೆಳಗಿನಮಕ್ಕಳಿಗೆ 100 ಮೀ ಓಟ, ರಿಲೇ , ಲಿಂಬೆ ಚಮಚ ಓಟ, ಸೂಜಿಗೆ ನೂಲು ಹಕುಹುದು, ಸ್ಲೋ ಸೈಕಲ್, ಬಕೇಟಿಗೆ ಬಾಲ್ ಹಾಕುವುದು ಸೇರಿದಂತೆ ಮುಂತಾದ ಕ್ರೀಡಾಕೂಟ ನಡೆಸಲಾಯಿತು

15 ವರ್ಷ ಮೇಲ್ಪಟ್ಟವರಿಗೆ 100ಮೀ ಓಟ, ರಿಲೇ , ಗೋಣಿಚೀಲ ಓಟ, ಹಗ್ಗ ಜಗ್ಗಾಟ, ಶಾಟ್ ಪುಟ್, ಸ್ಲೋ ಬೈಕ್ ರೇಸ್, ಮುಂತಾದ ಕ್ರೀಡಾಕೂಟ ನಡೆಸಲಾಯಿತು

ಕ್ರೀಡಾಕೂಟದಲ್ಲಿ ಒಟ್ಟು 5 ತಂಡಗಳು ಭಾಗವಹಿಸಿತು. ಕಾರ್ಯಕ್ರಮದ ಕೊನೆಯಲ್ಲಿ ಕ್ರೀಡೆಯಲ್ಲಿ ವಿಜಯಿಯಾದ ಸ್ಪರ್ಧಿಗಳಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ, ಆದರ್ಶ ಅಂಬೇಡ್ಕರ್ ಸೇವಾ ಸಮಿತಿ ಸುಳ್ಯ ತಾಲೂಕು ಇದರ ಗೌರಾವಾಧ್ಯಕ್ಷರಾದ ಎಂ ಬಿ ಚೋಮ, ರಫೀಕ್ ಬಿ ಎಂ, ತನ್ವಿರ್ ಮೆಸ್ಕಾಂ, ಎಸ್‌ಡಿಪಿಐ ಸುಳ್ಯ ವಿಧಾನಸಭಾ ಸಮಿತಿ ಸದಸ್ಯರಾದ ಅಬ್ದುಲ್ ಕಲಾಂ,ಯೂತ್ ಕಾಂಗ್ರೆಸ್ ಮುಖಂಡ ಶಾಫಿ ಕುತ್ತಮೊಟ್ಟೆ, ಉದ್ಯಮಿ ಫೈಝಲ್ ಕಟ್ಟೆಕಾರ್ ಸೇರಿದಂತೆ ಮತ್ತಿತ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!