July 18, 2026

ಪುತ್ತೂರು: ರಿಕ್ಷಾ ಚಾಲಕನ ಮೇಲೆ ಹಲ್ಲೆ:

0
image_editor_output_image496661873-1656954722406.jpg

ಪುತ್ತೂರು: ರಿಕ್ಷಾ ಚಾಲಕನ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿದ ಘಟನೆ ಕೆದಂಬಾಡಿ ಗ್ರಾಮದ ದರ್ಬೆಯಲ್ಲಿ ನಡೆದಿದೆ.

ಗೋಳ್ತಿಲ ಅರಿಯಡ್ಕ ನಿವಾಸಿ ಆಟೋ ಚಾಲಕ ಅನಿಲ್‌ ಕುಮಾರ್‌ (22) ಹಲ್ಲೆಗೊಳಗಾದವರು. ಮುಜೀದ್‌ ಹಲ್ಲೆ ನಡೆಸಿದ ಆರೋಪಿ. ಅನಿಲ್‌ ಕುಮಾರ್‌ ಅವರು ಪ್ರಯಾಣಿಕರೋರ್ವರನ್ನು ಸಾಗು ಕಡೆಯಿಂದ ತಿಂಗಳಾಡಿ ಕಡೆಗೆ ಅಟೋದಲ್ಲಿ ಕರೆದುಕೊಂಡು ಹೋಗುತಿದ್ದ ವೇಳೆ ಕಾರಿನಲ್ಲಿ ಹಾರ್ನ್ ಮಾಡಿಕೊಂಡು ಬಂದ ಮುಜೀದ್‌ ಎನ್ನುವಾತ ಓವರ್‌ ಟೇಕ್‌ ಮಾಡಿ ಕಾರಿನಿಂದ ಇಳಿದು ಆಟೋ ರಿಕ್ಷಾವನ್ನು ನಿಲ್ಲಿಸಿ ಅನಿಲ್‌ಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗಾಯಗೊಂಡ ಅನಿಲ್‌ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!