ಮರವಂತೆ ಸಮುದ್ರಕ್ಕೆ ಬಿದ್ದ ಕಾರಿನಲ್ಲಿದ್ದ ಡೆಡ್ ಬಾಡಿ ಎರಡು ದಿನಗಳ ಬಳಿಕ ಪತ್ತೆ
ಉಡುಪಿ: ಎರಡು ದಿನಗಳ ಹಿಂದೆ ಮರವಂತೆ ಸಮುದ್ರಕ್ಕೆ ಬಿದ್ದ ಕಾರಿನಿಂದ ನಾಪತ್ತೆಯಾದ ಓರ್ವನ ಶವ ಇಂದು ಬೈಂದೂರಿನ ಕಂಚುಗೋಡು ಎಂಬಲ್ಲಿ ಪತ್ತೆಯಾಗಿದೆ.
ಮೃತನನ್ನು ರೋಶನ್ ಆಚಾರ್ಯ ಎಂದು ಗುರುತಿಸಲಾಗಿದೆ.
ಶನಿವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ಮರವಂತೆ ಬೀಚ್ ನಲ್ಲಿ ವೇಗವಾಗಿ ಬಂದ ಕಾರು ಸಮುದ್ರಕ್ಕೆ ಬಿದ್ದಿತ್ತು.
ಈ ವೇಳೆ ಕಾರಿನಲ್ಲಿದ್ದ ನಾಲ್ವರಲ್ಲಿ ಕಾರ್ತಿಕ ಮತ್ತು ಸಂದೀಪ್ ಗಾಯಗೊಂಡು ಇಬ್ಬರು ಬದುಕಿ ಉಳಿದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿರಾಜ್ ಆಚಾರ್ಯನ ಶವ ಕಾರಿನಲ್ಲೆ ಪತ್ತೆಯಾಗಿತ್ತು. ರೋಶನ್ ಆಚಾರ್ಯ ಶವ ಅಲೆಗಳ ಹೊಡೆತಕ್ಕೆ ನಾಪತ್ತೆಯಾಗಿತ್ತು.
ನಾಪತ್ತೆಯಾಗಿದ್ದ ರೋಶನ್ ಆಚಾರ್ಯ ಶವ ಇಂದು ಕಂಚುಗೋಡು ಬಳಿ ಪತ್ತೆಯಾಗಿದೆ. ಗಂಗೊಳ್ಳಿ ಪೋಲಿಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.




