August 25, 2026

ಶಾಲಾ ವಾಹನಕ್ಕೆ ಬೈಕ್‌ ಢಿಕ್ಕಿ: ಶಿಕ್ಷಕ ಸ್ಥಳದಲ್ಲೇ ಸಾವು

0
image_editor_output_image1644646541-1656742025315.jpg

ಚಿತ್ರದುರ್ಗ: ಶಾಲಾ ವಾಹನಕ್ಕೆ ಬೈಕ್‌ ಢಿಕ್ಕಿಯಾಗಿ ಶಿಕ್ಷಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ನಂದಿಹಳ್ಳಿ ಬಳಿ ನಡೆದಿದೆ.

ಚಿತ್ರದುರ್ಗ ತಾಲೂಕಿನ ಬಹದ್ದೂರ್ ಘಟ್ಟ ಗ್ರಾಮದ ಕಲ್ಲಮ್ಮ ಪ್ರೌಢಶಾಲೆ ಶಿಕ್ಷಕ ಪ್ರದೀಪ್ (40) ಮೃತ ಶಿಕ್ಷಕ.

ಶನಿವಾರದ ಶಾಲಾ ಕರ್ತವ್ಯಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ನಂದಿಹಳ್ಳಿ ಬಳಿ ಎದುರು ಬರುತ್ತಿದ್ದ ಶಾಲಾ ವಾಹನಕ್ಕೆ ಢಿಕ್ಕಿ ಆಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸಿರಿಗೆರೆ ತರಳಬಾಳು ಬೃಹನ್ಮಠದ ಆಡಳಿತಾಧಿಕಾರಿ ನಿಜಲಿಂಗಪ್ಪನವರ ಪುತ್ರರಾಗಿದ್ದ  ಪ್ರದೀಪ್ ಈ ಹಿಂದೆ ಬಿದರಕೆರೆ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಎರಡು ವರ್ಷಗಳ ಹಿಂದೆ ಬಹದ್ದೂರ್ ಘಟ್ಟ ಪ್ರೌಢಶಾಲೆಗೆ ವರ್ಗಾವಣೆ ಆಗಿ ಬಂದಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!