March 21, 2026

ಸುಳ್ಯ: 4 ವರ್ಷದ ಮಗಳನ್ನು ಹಿಡಿದುಕೊಂಡು ತಾಯಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನ: ತಾಯಿ ಮೃತ್ಯು- ಬದುಕುಳಿದ ಮಗಳು

0
IMG-20220629-WA0008.jpg

ಸುಳ್ಯ: ತಾಲೂಕಿನ ದೇವಚಳ್ಳ ಗ್ರಾಮದ ತಳೂರು ಎಂಬಲ್ಲಿ ನಾಲ್ಕು ವರ್ಷ ಪ್ರಾಯವುಳ್ಳ ಮಗಳನ್ನು ತೆಗೆದುಕೊಂಡು ತಾಯಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ, ಮಗಳು ಅದೃಷ್ಟವಶಾತ್ ಬದುಕುಳಿದ ಘಟನೆ ವರದಿಯಾಗಿದೆ.

ಘಟನೆಯಿಂದ ಮೃತಪಟ್ಟ ಮಹಿಳೆ ಅಗ್ನಿಶಾಮಕ ದಳದ ಸಿಬ್ಬಂದಿ ದಯಾನಂದ ಎಂಬವರ ಪತ್ನಿ ಗೀತಾ ಎಂದು ತಿಳಿದುಬಂದಿದೆ. ಗೀತಾ ರವರು ಸುಳ್ಯದ ಖಾಸಗಿ ಶಿಕ್ಷಣ ಸಂಸ್ಥೆ ಒಂದರಲ್ಲಿ ಗುಮಾಸ್ತೆಯಾಗಿ ಕೆಲಸ ನಿರ್ವಹಿಸುತ್ತಿದ್ದರು.‌ ಇಂದು ಮುಂಜಾನೆ ತನ್ನ ನಾಲ್ಕು ವರ್ಷದ ಮಗಳು ಪೂರ್ವಿಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಇಂದು ಮುಂಜಾನೆ ಮನೆಯವರು ಎದ್ದಾಗ ಗೀತಾ ರವರು ಮನೆಯಲ್ಲಿ ಇರದಿರುವುದನ್ನು ಕಂಡು ಹುಡುಕಾಡಿದಾಗ ಬಾವಿಯಲ್ಲಿ ಮಗಳು ಮತ್ತು ಪತ್ನಿ ಬಿದ್ದಿರುವುದು ಕಂಡುಬಂದಿದೆ. ಮಗಳು ಬಾವಿಯೊಳಗೆ ಇದ್ದ ಕಲ್ಲಿನ‍ ಸಹಾಯದಿಂದ ಬದುಕುಳಿದಿದ್ದು ಆಕೆಯನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆ ತಂದಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!