November 21, 2024

ಇಂಜೆಕ್ಷನ್‌ ಎಫೆಕ್ಟ್: 14 ಮಕ್ಕಳು ದಿಢೀರನೆ ಅಸ್ವಸ್ಥ

0

ಸಾಗರ: ಅನಾರೋಗ್ಯದಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ 14 ಮಕ್ಕಳು ಭಾನುವಾರ ಸಂಜೆ ದಿಢೀರನೆ ಅಸ್ವಸ್ಥತರಾಗಿದ್ದು, ಇಂಜೆಕ್ಷನ್‌ ಅಡ್ಡ ಪರಿಣಾಮ ಇದಕ್ಕೆ ಕಾರಣ ಎನ್ನಲಾಗಿದೆ.

ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳಿಗೆ ರೋಗ ನಿರೋಧಕ ಔಷಧಿಯನ್ನು ಇಂಜೆಕ್ಷನ್‌ ಮೂಲಕ ನೀಡಿದ ಕೆಲ ಸಮಯದ ನಂತರ ಚಳಿ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.

‘ಯಾವ ಕಾರಣಕ್ಕೆ ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಅಸ್ವಸ್ಥರಾಗಿರುವ ಮಕ್ಕಳ ಪೈಕಿ ನಾಲ್ವರನ್ನು ಶಿವಮೊಗ್ಗದ ಆಸ್ಪತ್ರೆಗೆ ಕಳಿಸಲಾಗಿದೆ. ಯಾವುದೇ ಮಕ್ಕಳಿಗೂ ಪ್ರಾಣಾಪಾಯವಿಲ್ಲ’ ಎಂದು ಸರ್ಕಾರಿ ಆಸ್ಪತ್ರೆಯ ನಿಯೋಜಿತ ವೈದ್ಯ ಪ್ರಕಾಶ್ ಭೋಸ್ಲೆ ತಿಳಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಬಂದ ಶಾಸಕ ಎಚ್.ಹಾಲಪ್ಪ ಹರತಾಳು ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು. ‘ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಅಧೀಕ್ಷಕರೊಂದಿಗೆ ಚರ್ಚಿಸಿದ್ದು, ಮಕ್ಕಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರಕಲಿದೆ’ ಎಂದು ಹಾಲಪ್ಪ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!