ಕಾಸರಗೋಡು: ಹಲವು ಪ್ರಕರಣಗಳ ಆರೋಪಿ ನೇಣು ಬಿಗಿದು ಆತ್ಮಹತ್ಯೆ

ಕಾಸರಗೋಡು: ಹೆತ್ತ ತಾಯಿಯ ಕೊಲೆ ಸೇರಿದಂತೆ ಹಲವು ಪ್ರಕರಣಗಳ ಆರೋಪಿಯೋರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬದಿಯಡ್ಕದಲ್ಲಿ ನಡೆದಿದೆ.
ಬದಿಯಡ್ಕ ಗೋಳಿಯಡ್ಕ ಶಾಂತಿಪಳ್ಳದ ವೆಂಕಪ್ಪ ನಾಯ್ಕ (40) ಮೃತಪಟ್ಟವರು.
ಏಕಾಂಗಿಯಾಗಿ ಈತ ಮನೆಯಲ್ಲಿ ವಾಸವಾಗಿದ್ದನು. ವರ್ಷಗಳ ಹಿಂದೆ ತಾಯಿ ಕಮಲರನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ಈತ ಜೈಲು ಶಿಕ್ಷೆಗೆ ಅನುಭವಿಸಿ ಬಳಿಕ ಬಿಡುಗಡೆಗೊಂಡಿದ್ದನು.
ನಂತರ ಈತ ಕಳವು ಸೇರಿದಂತೆ ಹಲವು ಪ್ರಕರಣಗಳಲ್ಲೂ ಭಾಗಿಯಾಗಿದ್ದನು. ಬದಿಯಡ್ಕ ಠಾಣಾ ಪೊಲೀಸರು ಮಹಜರು ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.