ಒಂದೇ ಆಸ್ಪತ್ರೆಯಲ್ಲಿ ಕೆಲಸ ಮಾಡುವ 14 ನರ್ಸ್‌ಗಳು ಒಂದೇ ಸಮಯದಲ್ಲಿ ಪ್ರೆಗ್ನೆಂಟ್
ವಾಷಿಂಗ್ಟನ್: 2019ರಲ್ಲಿ ಕಾರ್ಮಿಕ ಹಾಗೂ ವಿತರಣಾ ಘಟಕದ 9 ಮಹಿಳೆಯರು ಒಂದೇ ಸಮಯದಲ್ಲಿ ಗರ್ಭಿಣಿಯರಾಗಿ ಸುದ್ದಿಯಾಗಿದ್ದರು. ಈ ಬಹು ಅಪರೂಪದ ಘಟನೆ ಮತ್ತೊಮ್ಮೆ ಮರುಕಳಿಸಿದೆ. ಈ ಬಾರಿ ಒಂದೇ ಕಡೆ ಕೆಲಸ ಮಾಡುವ 14 ನರ್ಸ್‌ಗಳು ಒಂದೇ ಸಮಯದಲ್ಲಿ ಪ್ರೆಗ್ನೆಂಟ್ ಆಗಿ ಸುದ್ದಿಯಾಗಿದ್ದಾರೆ.
ಅಮೆರಿಕದ ಕಾನ್ಸಾಸ್ ನಗರದಲ್ಲಿರುವ ಸೇಂಟ್ ಲ್ಯೂಕ್ ಈಸ್ಟ್ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ 14 ದಾದಿಯರು ಒಂದೇ ಸಮಯದಲ್ಲಿ ಗರ್ಭ ಧರಿಸಿದ್ದಾರೆ. 14 ದಾದಿಯರ ಪೈಕಿ ಮೊದಲು ಗರ್ಭಿಣಿಯಾಗಿದ್ದ ಕೈತಿಲಿನ್ ಹಾಲ್ ಜೂನ್ 3 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ನಮ್ಮ ಗುಂಪಿನಲ್ಲಿ ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದುದು ನಾನೊಬ್ಬಳೇ ಎಂದುಕೊಂಡಿದ್ದೆ. ಇದು ನನ್ನ ಮೊದಲ ಗರ್ಭಧಾರಣೆ. ಹೀಗಾಗಿ ಈ ವಿಚಾರವನ್ನು ನಾನು 12 ವಾರಗಳ ಕಾಲ ಯಾರಿಗೂ ಹೇಳಿರಲಿಲ್ಲ. ಆದರೆ ಇತರು ಗರ್ಭಿಣಿಯಾಗುತ್ತಿರುವುದನ್ನು ತಿಳಿಸಲು ಪ್ರಾರಂಭಿಸಿದಂತೆ ನಾನು ಕೂಡಾ ಬಹಿರಂಗಪಡಿಸಿದೆ ಎಂದು ಹಾಲ್ ಹೇಳಿದ್ದಾರೆ.
ಸೇಂಟ್ ಲೂಕ್ ಆಸ್ಪತ್ರೆ ಇನ್ನೂ 13 ಮಕ್ಕಳ ಜನನಕ್ಕೆ ಕಾಯುತ್ತಿದೆ. ಈ ವರ್ಷ ಡಿಸೆಂಬರ್ ಒಳಗಾಗಿ ಎಲ್ಲಾ ದಾದಿಯರೂ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.