August 25, 2026

ಮಾಣಿ: ಎಸ್.ಡಿ.ಪಿ.ಐ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ

0
IMG-20220621-WA0031.jpg

ಬಂಟ್ವಾಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಸ್ಥಾಪನಾ ದಿನದ ಅಂಗವಾಗಿ ಮಾಣಿ ವಲಯ ಸಮಿತಿ ವತಿಯಿಂದ ಮಾಣಿ ಜಂಕ್ಷನ್ ನಲ್ಲಿ ದ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ವಲಯ ಸಮಿತಿ ಸದಸ್ಯರಾದ ಇರ್ಫಾನ್ ಬುಡೋಳಿ ದ್ವಜಾರೋಹಣಗೈದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಮಾದ್ ಪಕ್ಷವನ್ನು ತಳಮಟ್ಟದಲ್ಲಿ ಬಲಿಷ್ಠಗೊಳಿಸಿ ಮುಂದೆ ಮಾಣಿ ಭಾಗದ ಪ್ರತೀಯೊಂದು ಗ್ರಾಮಪಂಚಾಯತ್ತಿನಲ್ಲೂ ಪಕ್ಷದ ಪ್ರತಿನಿಧಿಗಳು ಗೆದ್ದು ಬರಲು ಇಂದಿನಿಂದಲೇ ಪ್ರತೀಯೋರ್ವ ಕಾರ್ಯಕರ್ತರು ಸನ್ನದ್ದರಾಗುವಂತೆ ಕರೆನೀಡಿದರು.

ಕಾರ್ಯಕ್ರಮದಲ್ಲಿ ಲತೀಫ್ ಕೊಡಾಜೆ, ಸಿದ್ದೀಖ್ ಕೊಡಾಜೆ, ಶಾಫಿ ಸೂರಿಕುಮೇರ್, ಖಾಲಿದ್ ಸೂರಿಕುಮೇರ್, ಇಮ್ರಾನ್ ಬುಡೋಳಿ, ಮೊದಲಾದವರು ಉಪಸ್ಥಿತರಿದ್ದರು. ನಿಸಾರ್ ಗಡಿಯಾರ ಸ್ವಾಗತಿಸಿ ನಿರೂಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!