SDPI ಪಕ್ಷದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ತೆಂಕಕಾರಂದೂರು ಬೂತ್ ಸಮಿತಿ ವತಿಯಿಂದ ಶ್ರಮದಾನ ಕಾರ್ಯಕ್ರಮ
ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಎಸ್‌ಡಿಪಿಐ ತೆಂಕಕಾರಂದೂರು ಗ್ರಾಮ ಸಮಿತಿಯ ವತಿಯಿಂದ ಪೆರಾಲ್ದಕಟ್ಟೆಯಿಂದ ಗಿಂಡಾಡಿಗೆ ಹೋಗುವ ರಸ್ತೆಬದಿಯ ಸ್ವಚ್ಛತೆ ಮತ್ತು ರಸ್ತೆ ದುರಸ್ಥಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಸಂಧರ್ಭದಲ್ಲಿ ತೆಂಕಕಾರಂದೂರು 2 ನೇ ವಾರ್ಡಿನ ಗ್ರಾಮ ಪಂಚಾಯತ್ ಸದಸ್ಯರಾದ ನಿಝಾಮ್ ಕಟ್ಟೆ, SDPI ದಕ್ಷಣ ಕನ್ನಡ ಜಿಲ್ಲಾ ಸಮಿತಿ ಸದಸ್ಯ ನವಾಝ್ ಕಟ್ಟೆ, SDPI ತೆಂಕಕಾರಂದೂರು ಬೂತ್ ಸಮಿತಿ ಅಧ್ಯಕ್ಷರಾದ ಹಸನ್ ಕಟ್ಟೆ, ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.




