March 18, 2026

ಕಾನೂನುಬದ್ಧವಲ್ಲದ ಜೀವನ ವೈವಾಹಿಕ ಹಕ್ಕಿಗೆ ಅರ್ಹವಲ್ಲ: ಮದ್ರಾಸ್‌ ಹೈಕೋರ್ಟ್‌

0
image_editor_output_image1707728401-1636007126154.jpg

ಚೆನ್ನೈ: ಕಾನೂನುಬದ್ಧವಲ್ಲದ ವಿವಾಹದ ಯಾವುದೇ ದೀರ್ಘ ಸಹಬಾಳ್ವೆ ಅಥವಾ ಸಹ ಜೀವನ ನಡೆಸುವ ಕಕ್ಷಿದಾರರಿಗೆ ಕೌಟುಂಬಿಕ ನ್ಯಾಯಾಲಯದಲ್ಲಿ ವೈವಾಹಿಕ ವಿವಾದದ ಮೊಕದ್ದಮೆ ಹೂಡುವ ಕಾನೂನು ಹಕ್ಕು ಇಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ.

ಕೊಯಮತ್ತೂರಿನ ಆರ್. ಕಲೈಸೆಲ್ವಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮಂಗಳವಾರ ವಜಾಗೊಳಿಸಿ ನ್ಯಾಯಮೂರ್ತಿಗಳಾದ ಎಸ್. ವೈದ್ಯನಾಥನ್ ಮತ್ತು ಆರ್. ವಿಜಯಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಕಲೈಸೆಲ್ವಿ ಅವರು ವಿಚ್ಛೇದನ ಕಾಯ್ದೆ 1869ರ ಸೆಕ್ಷನ್‌ 32ರ ಅಡಿ ವೈವಾಹಿಕ ಹಕ್ಕುಗಳನ್ನು ಪಡೆಯಲು ಕೊಯಮತ್ತೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯವು 2019ರ ಫೆಬ್ರುವರಿ 14 ರಂದು ಅವರ ಮನವಿಯನ್ನು ತಿರಸ್ಕರಿಸಿತ್ತು. ನಂತರ ಅವರು ಮದ್ರಾಸ್‌ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

‘ಕಾನೂನುಬದ್ಧವಾಗಿ ವಿವಾಹ ನೆರವೇರದಿದ್ದಾಗ ಅವರು ದೀರ್ಘ ಮತ್ತು ನಿರಂತರವಾಗಿ ಒಟ್ಟಿಗೆ ಇದ್ದರೂ ಅವರಿಗೆ ವೈವಾಹಿಕ ಹಕ್ಕುಗಳಿಗಾಗಿ ಕಕ್ಷಿದಾರರು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಕಾನೂನು ಹಕ್ಕು ಇದುವುದಿಲ್ಲ’ ಎಂದು ಪೀಠವು ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.

Leave a Reply

Your email address will not be published. Required fields are marked *

You may have missed

error: Content is protected !!