67 ಕೆ.ಜಿ ಪಂಗೋಲಿನ್ ಚಿಪ್ಪು ಸಾಗಾಟ:
ಆರೋಪಿಗಳ ಬಂಧನ
ದಾವಣಗೆರೆ: ಶಿವಮೊಗ್ಗ ರಸ್ತೆಯ ಹರಿಹರದ ಬಳಿಯ ಡಾಬಾದಿಂದ ಸುಮಾರು 67 ಕೆ.ಜಿ ಪಂಗೋಲಿನ್ ಚಿಪ್ಪುಗಳನ್ನು ಸಾಗಿಸುತ್ತಿದ್ದ ಅಂತರ ಜಿಲ್ಲಾ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ರಮದ ಬಗ್ಗೆ ಮಾಹಿತಿ ಪಡೆದ ಡಿಸಿಆರ್‌ಬಿ ಡಿಎಸ್‌ಪಿ ಬಿ.ಎಸ್ ಬಸವರಾಜು ಮತ್ತು ತಂಡ ಶಿವಬಸವ ಡಾಬಾ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಎರಡು ವ್ಯಾನ್‌ಗಳಲ್ಲಿ ಪ್ಯಾಂಗೋಲಿನ್ ಸ್ಕೇಲ್ ಸಾಗಿಸುತ್ತಿರುವುದು ಪತ್ತೆಯಾಗಿದೆ. ಇದರೊಂದಿಗೆ 18 ಮಂದಿಯನ್ನು ಬಂಧಿಸಲಾಗಿದೆ.
ಆರೋಪಿಗಳ ವಿರುದ್ಧ ವನ್ಯಜೀವಿ (ರಕ್ಷಣೆ) ಕಾಯ್ದೆ, 1972 ರ ಅಡಿಯಲ್ಲಿ ಪ್ರಕರಣವನ್ನು ಸಹ ದಾಖಲಿಸಲಾಗಿದೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಚೀನಾ ಔಷಧಿಗೆ ಮುಳ್ಳುಹಂದಿ ಚಿಪ್ಪು ಬಳಕೆ ಮಾಡುವುದರಿಂದ ಪ್ರಪಂಚದಾದ್ಯಂತ ದೊಡ್ಡ ಪ್ರಮಾಣದಲ್ಲಿ ಈ ದಂಧೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.





