SDPI ಪಕ್ಷದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಸವಣೂರು ಗ್ರಾಮ ವ್ಯಾಪ್ತಿಯಲ್ಲಿ ಶ್ರಮದಾನ ಕಾರ್ಯಕ್ರಮ
ಸುಳ್ಯ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಎಸ್‌ಡಿಪಿಐ ಸವಣೂರು ಗ್ರಾಮ ಸಮಿತಿಯ ವತಿಯಿಂದ ಸರ್ವೆ, ಶಾಂತಿನಗರ, ಮಾಂತೂರು ಮತ್ತು ಸವಣೂರು ಬೂತ್ ವ್ಯಾಪ್ತಿಯಲ್ಲಿ ಶ್ರಮದಾನ ಮೂಲಕ ಸಾಮಾಜಿಕ ಕಾರ್ಯಕ್ರಮ ನಡೆಯಿತು.




ಮಾಂತೂರು ಬೂತ್ ಸಮಿತಿ ವತಿಯಿಂದ ಇಡ್ಯಾಡಿ ರಸ್ತೆ ದುರಸ್ತಿ ಹಾಗೂ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ , ಸವಣೂರು ಬೂತ್ ಸಮಿತಿ ವತಿಯಿಂದ ಬಸ್ಸು ತಂಗುದಾನ ಸ್ವಚ್ಛತೆ, ಶಾಂತಿನಗರ ಬೂತ್ ಸಮಿತಿ ವತಿಯಿಂದ ಶಾಂತಿನಗರ ಪರಿಸರ ಸ್ವಚ್ಛತಾ ಕಾರ್ಯ, ಸರ್ವೆ ಬೂತ್ ಸಮಿತಿ ವತಿಯಿಂದ ಅಂಬೇಡ್ಕರ್ ಭವನ ಸುತ್ತಮುತ್ತಲಿನ ಪ್ರದೇಶ ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸವಣೂರು ಗ್ರಾಮ ಪಂಚಾಯಿತಿಯ ಸದಸ್ಯರಾದ ರಫೀಕ್ ಎಂ.ಎ ಹಾಗೂ ರಝಾಕ್ ಕೆನರಾ, ಎಸ್‌ಡಿಪಿಐ ಸುಳ್ಯ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಅಲೆಕ್ಕಾಡಿ, ಎಸ್‌ಡಿಪಿಐ ಸವಣೂರು ಬ್ಲಾಕ್ ಅಧ್ಯಕ್ಷರಾದ ಯೂಸುಫ್ ಹಾಜಿ ಬೇರಿಕೆ ಹಾಗೂ ಸವಣೂರು ಬ್ಲಾಕ್ ಸಮಿತಿ ಹಾಗೂ ಬೂತ್ ಸಮಿತಿಯ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.




