July 6, 2026

ಪ್ರವಾದಿ ಬಗ್ಗೆ ಅವಹೇಳನಕಾರಿ ವರದಿ:
“ವಿಶ್ವವಾಣಿ” ಪತ್ರಿಕೆಯ ವಿರುದ್ಧ PFI ಬೆಳ್ತಂಗಡಿ ವತಿಯಿಂದ ಕೇಸು ದಾಖಲು

0
IMG-20220619-WA0006.jpg

ಬೆಳ್ತಂಗಡಿ: ಪ್ರವಾದಿಯವರ ಬಗ್ಗೆ ಅವಹೇಳನಕಾರಿ ವರದಿ ಮಾಡಿದ್ದ “ವಿಶ್ವವಾಣಿ” ಪತ್ರಿಕೆಯ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ನಾಯಕಿ ನೂಪುರ್ ಶರ್ಮಾ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಇದನ್ನು ವಿಶ್ವವಾಣಿ ಪತ್ರಿಕೆಯು ತನ್ನ ತಲೆ ಬರಹದಲ್ಲಿ “ಪ್ರವಾದಿ ಹಿಂಸಾಚಾರ” ಎಂಬ ವರದಿ ಪ್ರಕಟಿಸಿತ್ತು. ಇಸ್ಲಾಮ್ ಹಾಗೂ ಪ್ರವಾದಿ ಪೈಗಂಬರರ ಬಗ್ಗೆ ಅವಹೇಳನಕಾರಿಯಾಗಿ ವರದಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಧರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ಸಮಿತಿ ಸದಸ್ಯರುಗಳಾದ ದಾವೂದ್ ಜಿ.ಕೆ, ರಫೀಕ್ ಕನ್ನಡಿಕಟ್ಟೆ ಹಾಗೂ ಇಮ್ತಿಯಾಝ್ ಜಿ.ಕೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!