February 2, 2026

ಒಂದೇ ಇನಿಂಗ್ಸ್ ಅತಿಹೆಚ್ಚು ಸಿಕ್ಸರ್ ಸಿಡಿಸಿ ತನ್ನದೇ ದಾಖಲೆ ಮುರಿದ ಇಂಗ್ಲೆಂಡ್: 4, 6 ಮೂಲಕವೇ 300 ರನ್

0
image_editor_output_image640587616-1655532291339.jpg

ನೆದರ್ಲೆಂಡ್ಸ್: ಆತಿಥೇಯ ನೆದರ್ಲೆಂಡ್ಸ್‌ ವಿರುದ್ಧದ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಬರೋಬ್ಬರಿ 498 ರನ್‌ ಗಳಿಸುವ ಮೂಲಕ, ಈ ಮಾದರಿಯ ಪಂದ್ಯದ ಇನಿಂಗ್ಸ್‌ವೊಂದರಲ್ಲಿ ಅತಿಹೆಚ್ಚು ಮೊತ್ತ ಕಲೆಹಾಕಿದ ಸಾಧನೆ ಮಾಡಿದೆ.

ಆಮ್‌ಸ್ಟೆಲ್ವೀನ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ನೆದರ್ಲೆಂಡ್ಸ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಅದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್‌ ಪರ ಫಿಲ್‌ ಸಾಲ್ಟ್‌ (93 ಎಸೆತ, 122ರನ್), ಡೇವಿಡ್‌ ಮಲಾನ್ (109 ಎಸೆತ, 125ರನ್) ಹಾಗೂ ಜೋಸ್‌ ಬಟ್ಲರ್‌ (70 ಎಸೆತ, ಅಜೇಯ 162ರನ್) ಅಮೋಘ ಶತಕ ಸಿಡಿಸಿ ಮಿಂಚಿದರು. ಕೊನೆಯಲ್ಲಿ ಲಿಯಾಮ್‌ ಲಿವಿಂಗ್‌ಸ್ಟೋನ್‌ (22 ಎಸೆತ, ಅಜೇಯ 66ರನ್) ಬಿರುಸಿನ ಅರ್ಧಶತಕ ಬಾರಿಸಿದರು.

ಈ ಮೊತ್ತದೆದುರು ತಿಣುಕಾಡಿದ ನೆದರ್ಲೆಂಡ್ಸ್‌ 49.4 ಓವರ್‌ಗಳಲ್ಲಿ 266 ರನ್‌ ಗಳಿಸಿ ಆಲೌಟ್‌ ಆಯಿತು. ಮೋಯಿನ್‌ ಅಲಿ ಮೂರು ಮತ್ತು ಮಲಾನ್‌ 1 ವಿಕೆಟ್‌ ಕಿತ್ತರೆ, ಡೇವಿಡ್‌ ವಿಲ್ಲಿ, ರೀಸ್‌ ಟಾಪ್ಲೆ, ಸ್ಯಾಮ್‌ ಕರನ್‌ ತಲಾ ಎರಡು ವಿಕೆಟ್‌ ಹಂಚಿಕೊಂಡರು. ಹೀಗಾಗಿ ಎಯಾನ್‌ ಮಾರ್ಗನ್‌ ಪಡೆ 232ರನ್‌ ಅಂತರದ ಜಯ ಸಾಧಿಸಿತು.

Leave a Reply

Your email address will not be published. Required fields are marked *

error: Content is protected !!