July 6, 2026

ಗ್ರಾಮ ಪಂಚಾಯತ್‌ ಸಿಬ್ಬಂದಿಯಿಂದ ಕಿರುಕುಳ:
ಪಂಚಾಯತ್‌ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

0
image_editor_output_image-1124764734-1655531929389.jpg

ಸಾಗರ: ಲೇಔಟ್‌ನ ನಿವೇಶನ ಬಿಡುಗಡೆ ವಿಚಾರದಲ್ಲಿ ತಾಲೂಕಿನ ಖಂಡಿಕಾ ಗ್ರಾಮ ಪಂಚಾಯತ್‌ ಸಿಬ್ಬಂದಿ ನೀಡುತ್ತಿರುವ ಕಿರುಕುಳದಿಂದ ಮನನೊಂದು ವ್ಯಕ್ತಿಯೊರ್ವ ಪಂಚಾಯತ್‌ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಶುಕ್ರವಾರ ನಡೆದಿದೆ.

ಕುಗ್ವೆ ಗ್ರಾಮದ ನಿವಾಸಿ ಶ್ರೀಕಾಂತ್ ನಾಯ್ಕ್ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ.

ಶ್ರೀಕಾಂತ್ ಗೆ ಸೇರಿದ ಲೇಔಟ್‌ನ ಶೇ. 60ರಷ್ಟು ನಿವೇಶನಗಳನ್ನು ಮೊದಲ ಹಂತದಲ್ಲಿ ನಿಯಮಾನುಸಾರ ಬಿಡುಗಡೆ ಮಾಡಿಕೊಡಲು ಅವರು ಪಂಚಾಯತ್‌ಗೆ 5.80 ಲಕ್ಷ ರೂ. ಪಾವತಿ ಮಾಡಿದ್ದಾರೆ. ಹಣ ಪಾವತಿ ಮಾಡಿದ್ದರೂ ನಿವೇಶನ ಬಿಡುಗಡೆ ಮಾಡದೆ ಪಂಚಾಯತ್ ಪ್ರತಿನಿಧಿಗಳು, ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಶ್ರೀಕಾಂತ್ ತಮ್ಮ ಕುಟುಂಬದ ಸದಸ್ಯರೊಂದಿಗೆ ಗುರುವಾರ ಪಂಚಾಯತ್‌ ಎದುರು ಧರಣಿ ನಡೆಸಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!