February 2, 2026

ಪ್ರವಾದಿ ಮುಹಮ್ಮದ್ ಪೈಗಂಬರ್ ಕುರಿತು ವಿವಾದಾತ್ಮಕ ಹೇಳಿಕೆ: ನೂಪುರ್ ಶರ್ಮಾಗೆ ಬೆಂಬಲ ನೀಡಿದ ಗೌತಮ್ ಗಂಭೀರ್

0
image_editor_output_image70380298-1655111749217.jpg

ನವದೆಹಲಿ: ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ, ದೇಶ- ವಿದೇಶಗಳಲ್ಲಿ ವಿವಾದಕ್ಕೆ ಕಾರಣವಾಗಿರುವ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾಗೆ ಮಾಜಿ ಕ್ರಿಕೆಟಿಗ, ರಾಜಕಾರಣಿ ಗೌತಮ್ ಗಂಭೀರ್ ಬೆಂಬಲ ನೀಡಿದ್ದಾರೆ.

ಈ ಕುರಿತು #LetsTolerateintolerance” ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಗಂಭೀರ್, ಕ್ಷಮೆಯಾಚಿಸಿದ ಮಹಿಳೆಯ ವಿರುದ್ಧ ದೇಶಾದ್ಯಂತ ದ್ವೇಷ ಮತ್ತು ಕೊಲೆ ಬೆದರಿಕೆ ಮುಂದುವರೆದಿದ್ದರೂ ಜಾತ್ಯತೀತ ಉದಾರವಾದಿಗಳು ಎಂದು ಕರೆಯಲ್ಪಡುವವರು ಮೌನವಾಗಿರುತ್ತಾರೆ ಎಂದು ಹೇಳಿದ್ದಾರೆ.

ಸುಮಾರು 15 ಇಸ್ಲಾಮಿಕ್ ರಾಷ್ಟ್ರಗಳ ಪ್ರತಿಭಟನೆ ನಡುವೆ ಬಿಜೆಪಿ ಕಳೆದ ವಾರ ನೂಪುರ್ ಶರ್ಮಾನ್ನು ಅಮಾನತುಗೊಳಿಸಿತ್ತು ಮತ್ತು ದೆಹಲಿ ಘಟಕದ ಮಾಧ್ಯಮ ಮುಖ್ಯಸ್ಥ ನವೀನ್ ಜಿಂದಾಲ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದೆ.

ಬಿದೆಪಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್ ಕೂಡಾ ಸತ್ಯ ಹೇಳುವುದು ಬಂಡಾಯವಾದರೆ, ನಾನು ಕೂಡಾ ಬಂಡಾಯವೇ” ಎಂದು ಟ್ವೀಟ್ ಮಾಡುವ ಮೂಲಕ ನೂಪುರ್ ಶರ್ಮಾ ಅವರಿಗೆ ಬೆಂಬಲ ನೀಡಿದ್ದಾರೆ. 

Leave a Reply

Your email address will not be published. Required fields are marked *

error: Content is protected !!