ಸೀರೆ ಮಾರುವ ಸೋಗಿನಲ್ಲಿ ಗಾಂಜಾ ಮಾರಾಟ:
ಮೂವರು ಅಂತಾರಾಜ್ಯ ದಂಧೆಕೋರರು ಸೇರಿ ಐವರ ಬಂಧನ
ಬೆಂಗಳೂರು: ಸೀರೆ ಮಾರಾಟಗಾರರ ಸೋಗಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಅಂತಾರಾಜ್ಯ ದಂಧೆಕೋರರು ಸೇರಿ ಐವರು ಯಶವಂತಪುರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆಂಧ್ರಪ್ರದೇಶದ ತಿರುಪತಿ ಮೂಲದ ಕಾಳ ಪಾಲಿ ನಾಗೇಂದ್ರ (32), ವಿಶಾಖಪಟ್ಟಣಂನ ಜಮೀಲ್ ಅಲಿಯಾಸ್ ಶಿವ (29), ರಾಮಣ್ಣ (32), ಸ್ಥಳೀಯ ನಿವಾಸಿಗಳಾದ ಕಿರಣ್ (28), ಮಣಿಕಂಠ (31) ಬಂಧಿತರು.
ಆರೋಪಿಗಳಿಂದ 53.05 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಯಶವಂತಪುರ ಠಾಣೆ ವ್ಯಾಪ್ತಿಯ ಜಯರಾಮ್ ಕಾಲೋನಿ, ಕೆನರಾ ಯೂನಿಯಲ್ ರಸ್ತೆ ಹಾಗೂ ಇತರೆಡೆ ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.




