November 21, 2024

ಅರಂತೋಡು ಶೈಖುನಾ ಡಾ.ಕೆ.ಎಮ್.ಶಾಹ್ ಮುಸ್ಲಿಯಾರ್ ರವರ ಅನುಸ್ಮರಣೆ:
ಮರಣ ಎಂಬುದು ಅಂತ್ಯವಲ್ಲ ಅದು ಪ್ರಾರಂಭ: ಮಹಮ್ಮದ್ ಹನೀಫ್ ನಿಝಾಮಿ

0

ಸುಳ್ಯ: ನಮಗೆ ಮರಣ ಎಂಬುದು ಅಂತ್ಯವಾಗುವುದಿಲ್ಲ ಅದು ಪ್ರಾರಂಭ ಮರಣ ನಂತರದ ಜೀವನವೇ ನಮಗೆ ಶಾಶ್ವತ ಜೀವನ ಅದಕ್ಕಾಗಿ ಶೈಖುನಾ ಡಾ.ಕೆ.ಎಮ್.ಶಾಹ್ ಮುಸ್ಲಿಯಾರ್ ರಂತಹ ಅನೇಕ ಮಹನೀಯರು ತಮ್ಮ ಜೀವಿತಾವಧಿಯಲ್ಲಿ ನಿಷ್ಕಂಳಕವಾಗಿ ಬದುಕಿದರು. ಅದುದರಿಂದ ಅವರ ಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ .ಎಂದು ಖ್ಯಾತ ವಾಗ್ಮಿ ಧಾರ್ಮಿಕ ವಿದ್ವಾಂಸ ಯು.ಕೆ. ಮಹಮ್ಮದ್ ಹನೀಫ್ ನಿಝಾಮಿ ಹೇಳಿದರು.

ಅವರು ಅರಂತೋಡು ತೆಕ್ಕಿಲ್ ಸಮುದಾಯಭವನದಲ್ಲಿ ನಡೆದ ಮರ್ಹೂಂ ಡಾ.ಕೆ.ಎಮ್.ಶಾಹ್ ಮುಸ್ಲಿಯಾರ್ ರವರ 3 ನೇ ವರ್ಷದ ಅನುಸ್ಮರಣಾ ಸಮಾರಂಭದಲ್ಲಿ ಮುಖ್ಯ ಪ್ರಭಾಷಣರಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಅರಂತೋಡು ಬದ್ರಿಯಾ ಜುಮ್ಮಾಮಸೀದಿ ಅಧ್ಯಕ್ಷ ಹಾಜಿ ಅಶ್ರಫ್ ಗುಂಡಿ ವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಪೇರಡ್ಕ ಮುಹಿಯ್ಯದ್ದೀನ್ ಜುಮ್ಮಾಮಸೀದಿ ಖತೀಬರಾದ ಬಹು ರಿಯಾಝ್ ಫೈಝಿ ನೆರವೇರಿಸಿದರು.

ಅರಂತೋಡು ಜುಮ್ಮಾಮಸೀದಿ ಖತೀಬರಾದ ಬಹು ಅಲ್ ಹಾಜ್ ಇಸ್ಹಾಖ್ ಬಾಖವಿ ದುವಾಗೈದರು. ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ.ಎಮ್.ಶಹೀದ್ ತೆಕ್ಕಿಲ್ ಹಾಗೂ ಡಾ.ಶಾಹ್ ಮುಸ್ಲಿಯಾರ್ ಫೌಂಡೇಷನ್‌ ಕಾರ್ಯದರ್ಶಿ ಸಿರಾಜ್ ಹುಸೈನ್ ಅತೂರು ಶುಭಹಾರೈಸಿದರು.‍ ಮುಖ್ಯ ಅತಿಥಿಗಳಾಗಿ ಪೇರಡ್ಕ ಜುಮ್ಮಾ ಮಸೀದಿ ಅಧ್ಯಕ್ಷ ಅಲಿ ಹಾಜಿ, ಸುಳ್ಯ ಗಾಂಧಿನಗರ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಕೆ.ಎಮ್.ಮುಸ್ತಫಾ, ಎಪಿಎಂಸಿ ನಿರ್ದೇಶಕ ಅದಂ ಹಾಜಿ ಕಮ್ಮಾಡಿ, ನುಸ್ರತುಲ್ ಇಸ್ಲಾಂ ಮದರಸ ಅಧ್ಯಾಪಕ ಸಹದ್ ಫೈಝಿ, ಹಾಜಿ ಸಾಜಿದ್ ಅಝ್ಝಹರಿ, ಸುಳ್ಯ ಅನ್ಸಾರಿಯಾ ಯತೀಂಖಾನ ಅಧ್ಯಕ್ಷ ಹಾಜಿ ಮಜೀದ್ ಜನತಾ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ, ಸುಳ್ಯ ಎಸ್ ವೈ ಸಿ ಅಧ್ಯಕ್ಷ ಹಮೀದ್ ಹಾಜಿ, ಪೆರಾಜೆ ಜುಮ್ಮಾಮಸೀದಿ ಅಧ್ಯಕ್ಷ ಶಹೀದ್ ಪೆರಾಜೆ, ಸುಳ್ಯ ತಾಲ್ಲೂಕು ಮದರಸ ಮ್ಯಾನೇಜ್‌ಮೆಂಟ್ ಅದ್ಯಕ್ಷ ತಾಜ್ ಮಹಮ್ಮದ್, ಅಹಮದ್ ಹಾಜಿ ಸುಪ್ರೀಂ, ಹಾಜಿ ಉಮ್ಮರ್ ಕಟ್ಟೆಕಾರ್ಸ್, ಫ್ರೆಂಡ್ಸ್ ಕ್ಲಬ್ ಬೀಜ ಕೊಚ್ಚಿ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ, ಅರಂಬೂರು ಜುಮ್ಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಕ್ಬರ್ ಕರಾವಳಿ, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅಧ್ಯಕ್ಷ ಅಬ್ದುಲ್ ಮಜೀದ್, ನಿವೃತ್ತ ಉಪನ್ಯಾಸಕ ಅಬ್ದುಲ್ಲಾ ಮಾಸ್ಟರ್, ಹಂಸ ಮುಸ್ಲಿಯಾರ್, ಪೇರಡ್ಕ ನೂರುದ್ದೀನ್ ಮುಸ್ಲಿಯಾರ್, ಸಂಸುದ್ದೀನ್ ಫೈಝಿ ಬಿಳಿಯಾರು, ಅರಂಬೂರು ಜುಮ್ಮಾ ಮಸೀದಿ ಖತೀಬರಾದ ಹಾರೀಸ್ ಮಕ್ತೂಮಿ, ಮುನೀರ್ ದಾರಿಮಿ ಗೂನಡ್ಕ ಭಾಗವಹಿಸಿದರು.

ವೇದಿಕೆಯಲ್ಲಿ ಅರಂತೋಡು ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷರುಗಳಾದ ಹಾಜಿ ಟಿ.ಎಮ್.ಬಾಬ ತೆಕ್ಕಿಲ್, ಅಹಮದ್ ಕುಂಞ ಪಟೇಲ್, ಹಾಜಿ ಕೆ.ಎಮ್.ಮಹಮ್ಮದ್, ಹಾಜಿ ಎಸ್.ಇ.ಮಹಮ್ಮದ್, ಕೆ.ಎಮ್.ಅಬೂಬಕ್ಕರ್ ಪಾರೆಕ್ಕಲ್, ಅಬ್ದುಲ್ ಖಾದರ್ ಪಟೇಲ್, ಎಸ್ ಕೆ ಎಸ್ ಎಸ್ ಎಫ್ ಅರಂತೋಡು ಶಾಖೆ ಅಧ್ಯಕ್ಷ ಅಶೀಕ್ ಕುಕ್ಕುಂಬಳ,ಅರಂತೋಡು ಯೂತ್ ವಿಂಗ್ ಕಾರ್ಯದರ್ಶಿ ಫಯಾಝ್ ಪಟೇಲ್, ಅರಂತೋಡು ನುಸ್ರತುಲ್ ಇಸ್ಲಾಂ ಮದರಸ ಸಂಚಾಲಕ ಅಮೀರ್ ಕುಕ್ಕುಂಬಳ ಮೊದಲಾದವರು ಉಪಸ್ಥಿತರಿದ್ದರು.

ಸುಳ್ಯ ಎಸ್ ಕೆ ಎಸ್ ಎಸ್ ಎಫ್ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಅರಂತೋಡು, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಉಪಾಧ್ಯಕ್ಷ ಶರೀಫ್ ಕುಕ್ಕುಂಬಳ, ಅರೀಫ್ ದರ್ಖಾಸ್, ಶರಫುದ್ದೀನ್, ಜುಬೈರ್ ಸಹಕರಿಸಿದರು. ಜಮಾ ಅತ್ ಕಾರ್ಯದರ್ಶಿ ಕೆ.ಎಮ್.ಮೂಸಾನ್ ಸ್ವಾಗತಿಸಿ ಕೊಶಾಧಿಕಾರಿ ಬದುರುದ್ದೀನ್ ಪಟೇಲ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!