ಈಜಲು ಹೋದ ಇಬ್ಬರು ಬಾಲಕಿ ಸಹೋದರಿಯರು ನೀರುಪಾಲು
ರಾಯಚೂರು: ಬಾವಿಯಲ್ಲಿ ಈಜಲು ಹೋದ ಇಬ್ಬರು ಬಾಲಕಿಯರು ನೀರುಪಾಲಾಗಿರುವ ಘಟನೆ ತಾಲೂಕಿನ ಯರಗೇರಾದಲ್ಲಿ ನಡೆದಿದೆ.
ತನಾಜ್ (16) ಹಾಗೂ ಮುಸ್ಕಾನ್ (17) ಮೃತಪಟ್ಟ ಸಹೋದರಿಯರು
ತುಂಬಿದ ಬಾವಿಯಲ್ಲಿ ಈಜಲು ತೆರಳಿದ್ದ ಸಹೋದರಿಯರು ಈಜು ಬಾರದೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ರಾಯಚೂರು ನಗರದ ನಿವಾಸಿಗಳಾದ ಬಾಲಕಿಯರು ಅತ್ತೆಯ ಮನೆಗೆ ತೆರಳಿದ್ದರು. ಈ ವೇಳೆ ಬಾವಿಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾರೆ.
ಬಾಲಕಿಯರು ಸಾವನ್ನಪ್ಪಿದ ಹಿನ್ನೆಲೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಕುರಿತು ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




