February 4, 2026

ಆಧಾರ್ ಕಾರ್ಡ್‌ಗಳ ಫೋಟೊಕಾಪಿಗಳನ್ನು ಹಂಚಿಕೊಳ್ಳಬೇಡಿ: ಕೇಂದ್ರ ಸರ್ಕಾರದ ಸೂಚನೆ

0
image_editor_output_image887709847-1653827701035.png

ಹೊಸದಿಲ್ಲಿ: ಆಧಾರ್ ಕಾರ್ಡ್‌ಗಳ ಫೋಟೊಕಾಪಿಗಳನ್ನು ಯಾವುದೇ ಸಂಸ್ಥೆ ಜತೆ ಹಂಚಿಕೊಳ್ಳಬೇಡಿ ಎಂದು ಕೇಂದ್ರ ಸರ್ಕಾರ ನಾಗರಿಕರಿಗೆ ಸೂಚನೆ ನೀಡಿದೆ. ಆಧಾರ್ ಕಾರ್ಡ್‌ಗಳ ದುರ್ಬಳಕೆಯನ್ನು ತಡೆಯಲು ಅದು ಮಹತ್ವದ ಸಲಹೆ ಹೊರಡಿಸಿದೆ. ಆಧಾರ್ ಕಾರ್ಡ್‌ಗಳ ದುರ್ಬಳಕೆಗೆ ಅವಕಾಶ ನೀಡದಂತೆ ಆಧಾರ್ ಕಾರ್ಡ್‌ಗಳ ಮುಚ್ಚಿದ ಪ್ರತಿಗಳನ್ನು ಮಾತ್ರ ಹಂಚಿಕೊಳ್ಳುವಂತೆ ಸರ್ಕಾರ ಭಾನುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

“ಯಾವುದೇ ಸಂಸ್ಥೆಯ ಜತೆಗೆ ನಿಮ್ಮ ಆಧಾರ್ ಫೋಟೊ ಕಾಪಿಯನ್ನು ಹಂಚಿಕೊಳ್ಳಬೇಡಿ. ಏಕೆಂದರೆ ಅದು ದುರ್ಬಳಕೆ ಆಗಬಹುದು. ಅದರ ಬದಲು, ದಯವಿಟ್ಟು ನಿಮ್ಮ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಸಂಖ್ಯೆ ಮಾತ್ರ ಕಾಣಿಸುವಂತಹ ಮುಸುಕುಧಾರಿ ಆಧಾರ್ ಕಾರ್ಡ್ ಅನ್ನು ಬಳಸಿ” ಎಂದು ಹೇಳಿದೆ. ಪರವಾನಗಿ ಇಲ್ಲದ, ಹೋಟೆಲ್‌ಗಳು ಮತ್ತು ಸಿನಿಮಾ ಮಂದಿರಗಳಂತಹ ಖಾಸಗಿ ಸಂಸ್ಥೆಗಳು ಆಧಾರ್ ಕಾರ್ಡ್ ಸಂಗ್ರಹಿಸಲು ಅಥವಾ ಅದರ ಪ್ರತಿಗಳನ್ನು ಇರಿಸಿಕೊಳ್ಳಲು ಅನುಮತಿ ಇಲ್ಲ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿದ ಸೂಚನೆ ತಿಳಿಸಿದೆ.

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದಿಂದ ಬಳಕೆದಾರ ಪರವಾನಗಿ ಪಡೆದ ಸಂಸ್ಥೆಗಳು ಮಾತ್ರ ವ್ಯಕ್ತಿಯೊಬ್ಬರ ಗುರುತಿನ ವಿವರಗಳನ್ನು ಪಡೆದುಕೊಳ್ಳಲು ಆಧಾರ್ ಕಾರ್ಡ್ ಬಳಸಿಕೊಳ್ಳಬಹುದಾಗಿದೆ” ಎಂದು ಸಚಿವಾಲಯ ತಿಳಿಸಿದೆ. ಯಾವುದೇ ಸಂಸ್ಥೆಯ ಜತೆ ಆಧಾರ್ ಕಾರ್ಡ್‌ಗಳನ್ನು ಹಂಚಿಕೊಳ್ಳುವ ಮುನ್ನ, ಅದು ಯುಐಡಿಎಐನಿಂದ ಅಧಿಕೃತ ಬಳಕೆದಾರ ಪರವಾನಗಿ ಹೊಂದಿದೆಯೇ ಎಂಬುದನ್ನು ಪರಿಶೀಲನೆ ನಡೆಸುವಂತೆ ನಾಗರಿಕರಿಗೆ ಸಲಹೆ ಕೊಟ್ಟಿದೆ.

ಆಧಾರ್ ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಲು ಇಂಟರ್ನೆಟ್ ಕೆಫೆಗಳಲ್ಲಿನ ಸಾರ್ವಜನಿಕ ಕಂಪ್ಯೂಟರ್‌ಗಳನ್ನು ಬಳಕೆ ಮಾಡಬಾರದು ಎಂದು ಕೂಡ ಸರ್ಕಾರ ಎಚ್ಚರಿಕೆ ನೀಡಿದೆ. ಒಂದು ವೇಳೆ ಹಾಗೆ ಮಾಡಿದ್ದರೆ, ಕಂಪ್ಯೂಟರ್‌ನಲ್ಲಿ ಡೌನ್‌ಲೋಡ್ ಮಾಡಿದ ಎಲ್ಲ ಇ- ಆಧಾರ್‌ಗಳ ಪ್ರತಿಗಳನ್ನು ಶಾಶ್ವತವಾಗಿ ಡಿಲೀಟ್ ಮಾಡುವುದನ್ನು ಖಾತರಿಪಡಿಸಿಕೊಳ್ಳಿ ಎಂದು ಹೇಳಿದೆ.

Leave a Reply

Your email address will not be published. Required fields are marked *

You may have missed

error: Content is protected !!