March 26, 2026

ಪುತ್ತೂರು:‌ ತವರಿಗೆ ಬಂದಿದ್ದ ಮಹಿಳೆ ಮಗುವಿನೊಂದಿಗೆ ನಾಪತ್ತೆ

0
2_11_16_56_Police-_1_H@@IGHT_498_W@@IDTH_600.jpg

ಪುತ್ತೂರು: ತವರಿಗೆ ಬಂದಿದ್ದ ಮಹಿಳೆ ಮತ್ತು ಒಂದೂವರೆ ವರ್ಷದ ಮಗು ನಾಪತ್ತೆಯಾಗಿರುವ ಘಟನೆ ನಡೆದಿದೆ.

ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಪುಳಿತ್ತಡಿ ನಿವಾಸಿ ನೆಲ್ಯಾಡಿ ಅಲ್ತಾ ಎಂಬವರ ಪತ್ನಿ ಇರ್ಶಾನಾ (25) ಹಾಗೂ ಅವರ ಒಂದೂವರೆ ವರ್ಷದ ಮಗ ಮೊಹಮ್ಮದ್ ಆದಿಲ್ ನಾಪತ್ತೆಯಾಗಿದ್ದಾರೆ.

ವಾರದ ಹಿಂದೆ ಇರ್ಶಾನಾ ಪುಳಿತ್ತಡಿಯಲ್ಲಿರುವ ತನ್ನ ತವರು ಮನೆಗೆ ಹೋಗಿದ್ದು, ಮದುವೆಗೆಂದು ಕೇರಳಕ್ಕೆ ತೆರಳಿದ್ದ ಆಕೆಯ ಪೋಷಕರು ಮೇ 20 ರಂದು ಮನೆಗೆ ಹಿಂದಿರುಗಿದಾಗ ಆಕೆ ತನ್ನ ಮಗನೊಂದಿಗೆ ನಾಪತ್ತೆಯಾಗಿದ್ದಳು. ಈ ಸಂಬಂಧ ಇರ್ಷಾನ ತಂದೆ ಅಬ್ದುಲ್ ಲತೀಫ್ ನೀಡಿದ ದೂರಿನ ಮೇರೆಗೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!