April 12, 2025

ನಾಪತ್ತೆಯಾಗಿದ್ದ ನೇಪಾಳ ವಿಮಾನ ಲಾಮ್ಚೆ ನದಿಯಲ್ಲಿ ಪತನ: ಪತನವಾದ ಸ್ಥಳವನ್ನು ಪತ್ತೆ ಹಚ್ಚಿದ ನೇಪಾಳ ಸೇನೆಯ ಹೆಲಿಕಾಪ್ಟರ್

0

ಕಾಠ್ಮಂಡು: ನಾಲ್ವರು ಭಾರತೀಯರು ಸೇರಿದಂತೆ 22 ಜನರಿದ್ದ ನೇಪಾಳ ಏರ್‌ ಲೈನ್‌ ನ ಸಣ್ಣ ವಿಮಾನವು ಪತನಗೊಂಡಿರುವ ಸ್ಥಳವನ್ನು ನೇಪಾಳ ಸೇನೆಯ ಹೆಲಿಕಾಪ್ಟರ್ ಪತ್ತೆ ಮಾಡಿದೆ ಎಂದು ದೇಶದ ನಾಗರಿಕ ವಿಮಾನಯಾನ ಪ್ರಾಧಿಕಾರವನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ತಿಳಿಸಿವೆ.

ಸ್ಥಳೀಯರು ನೇಪಾಳ ಸೇನೆಗೆ ನೀಡಿದ ಮಾಹಿತಿಯ ಪ್ರಕಾರ, ತಾರಾ ಏರ್ ವಿಮಾನವು ಮಾನಪತಿ ಹಿಮಾಲ್ ಭೂಕುಸಿತದ ಅಡಿಯಲ್ಲಿ ಲಾಮ್ಚೆ ನದಿಯಲ್ಲಿ ಪತನಗೊಂಡಿದೆ. ನೇಪಾಳ ಸೇನೆಯು ನೆಲ ಮತ್ತು ವಾಯು ಮಾರ್ಗದಿಂದ ಘಟನಾ ಸ್ಥಳದ ಕಡೆಗೆ ಚಲಿಸುತ್ತಿದೆ ಎಂದು ಸೇನಾ ವಕ್ತಾರ ನಾರಾಯಣ ಸಿಲ್ವಾಲ್ ಮಾಹಿತಿ ನೀಡಿದ್ದಾರೆ.

ನೇಪಾಳದ ತಾರಾ ಏರ್‌ ಗೆ ಸೇರಿದ ಟ್ವಿನ್ ಓಟರ್ 9ಎನ್-ಎಇಟಿ ವಿಮಾನವು ಪೋಖರಾದಿಂದ ಬೆಳಿಗ್ಗೆ 9:55 ಕ್ಕೆ ಹೊರಟಿತು ಮತ್ತು 15 ನಿಮಿಷಗಳ ನಂತರ ನಿಯಂತ್ರಣ ಗೋಪುರದ ಸಂಪರ್ಕವನ್ನು ಕಳೆದುಕೊಂಡಿತು ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ.

 

 

“ಕಾಣೆಯಾದ ವಿಮಾನದ ಕ್ಯಾಪ್ಟನ್ ಘಿಮಿರೆ ಅವರ ಸೆಲ್ ಫೋನ್ ರಿಂಗಣಿಸುತ್ತಿದೆ. ನೇಪಾಳ ಟೆಲಿಕಾಂನಿಂದ ಕ್ಯಾಪ್ಟನ್ ಫೋನನ್ನು ಟ್ರ್ಯಾಕ್ ಮಾಡಿದ ನಂತರ ನೇಪಾಳ ಸೇನೆಯ ಹೆಲಿಕಾಪ್ಟರ್ ಅಪಘಾತದ ಪ್ರದೇಶದಲ್ಲಿ ಇಳಿದಿದೆ” ಎಂದು ವರದಿಯಾಗಿದೆ

ಮೈ ರಿಪಬ್ಲಿಕಾ ಪತ್ರಿಕೆಯ ಪ್ರಕಾರ, 10 ಸೈನಿಕರು ಮತ್ತು ನಾಗರಿಕ ವಿಮಾನಯಾನ ಪ್ರಾಧಿಕಾರದ ಇಬ್ಬರು ಉದ್ಯೋಗಿಗಳನ್ನು ಹೊತ್ತ ನೇಪಾಳ ಸೇನೆಯ ಹೆಲಿಕಾಪ್ಟರ್ ಅಪಘಾತದ ಸಂಭವನೀಯ ಸ್ಥಳವಾದ ನಾರ್ಶಾಂಗ್ ಮಠದ ಬಳಿ ನದಿಯ ದಡದಲ್ಲಿ ಇಳಿಯಿತು. ನೇಪಾಳ ಟೆಲಿಕಾಂ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್) ನೆಟ್‌ವರ್ಕ್ ಮೂಲಕ ವಿಮಾನದ ಕ್ಯಾಪ್ಟನ್ ಪ್ರಭಾಕರ್ ಘಿಮಿರೆ ಅವರ ಸೆಲ್‌ಫೋನ್ ಅನ್ನು ಪತ್ತೆಹಚ್ಚಿದ ನಂತರ ವಿಮಾನವನ್ನು ಪತ್ತೆ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!