ಧಾರವಾಡ ಅಪಘಾತ ಪ್ರಕರಣ: ಮೃತರಪಟ್ಟವರ ಸಂಖ್ಯೆ ಒಂಬತ್ತಕ್ಕೆ ಏರಿಕೆ
ಹುಬ್ಬಳ್ಳಿ: ಧಾರವಾಡ ತಾಲ್ಲೂಕಿನ ಬಾಡ ಕ್ರಾಸ್ ಬಳಿ ನಡೆದ ಟೆಂಪೋ ಟ್ರಾಕ್ಸ್ ಅಪಘಾತದಲ್ಲಿ ಮೃತರಪಟ್ಟವರ ಸಂಖ್ಯೆ ಒಂಬತ್ತಕ್ಕೆ ಏರಿದೆ.
ತಲೆಗೆ ಗಂಭೀರ ಗಾಯವಾಗಿ ಕಿಮ್ಸ್ಗೆ ದಾಖಲಾಗಿದ್ದ ಚೆನ್ನವ್ವ ನಿಗದಿ(45) ಮತ್ತು ಮನುಶ್ರೀ ಬಸವರಾಜ ದಾಸನಕೊಪ್ಪ(16) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ತಲೆಗೆ ತೀವ್ರ ಪೆಟ್ಟು ಬಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಐದು ವರ್ಷದ ಆರಾಧ್ಯ ಮತ್ತು 13 ವರ್ಷದ ಮುತ್ತು ಮರಿಗೌಡರ ಗಂಭೀರವಾಗಿದ್ದಾರೆ. ಸಣ್ಣ ಪುಟ್ಟ ಗಾಯಗೊಂಡಿದ್ದ ಉಳಿದ ಒಂಬತ್ತು ಮಂದಿಗೆ ತುರ್ತು ಚಿಕಿತ್ಸಾ ವಿಭಾಗ ಹಾಗೂ ಸಾಮಾನ್ಯ ವಾರ್ಡ್’ನಲ್ಲಿ ಚಿಕಿತ್ಸೆ ಮುಂದುವರಿದಿದೆ.
ಅಪಘಾತ ನಡೆದ ಸ್ಥಳದಲ್ಲಿ ಏಳು ಮಂದಿ ಮೃತಪಟ್ಟಿದ್ದರು.




