ಶಿವನಿಗೆ ಯಾವುದೇ ಜಾಗದ ಅಗತ್ಯವಿಲ್ಲ: ನಟಿ ಕಂಗನಾ ರಣಾವತ್

ಮುಂಬಯಿ: “ಮಥುರಾದ ಪ್ರತಿ ಕಣದಲ್ಲಿ ಶ್ರೀಕೃಷ್ಣ ಮತ್ತು ಅಯೋಧ್ಯೆಯ ಪ್ರತಿ ಕಣದಲ್ಲಿ ಶ್ರೀರಾಮನಿದ್ದಾನೆ. ಹಾಗೆಯೇ, ಕಾಶಿಯ ಪ್ರತಿ ಕಣದಲ್ಲಿಯೂ ಶಿವನಿದ್ದಾನೆ ಎಂದು ನಟಿ ಕಂಗನಾ ರಣಾವತ್ ಹೇಳಿಕೆ ನೀಡಿದ್ದಾರೆ.
ಕಂಗನಾ ರಣಾವತ್ ಅವರು ‘ಧಕಡ್’ ಚಿತ್ರದ ತಂಡ ಮತ್ತು ಪಾತ್ರವರ್ಗದೊಂದಿಗೆ ನಿನ್ನೆ ವಾರಾಣಸಿಯ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಜ್ಞಾನವಾಪಿ ಮಸೀದಿಯ ಶಿವಲಿಂಗ, ಜಾಗದ ಹಕ್ಕಿನ ಕುರಿತು ಕೇಳಿದಾಗ, ಶಿವನಿಗೆ ಯಾವುದೇ ರಚನೆಯ ಅಗತ್ಯವಿಲ್ಲ, ಅವನು ಪ್ರತಿ ಕಣದಲ್ಲೂ ನೆಲೆಸಿದ್ದಾನೆ” ಎಂದಿದ್ದಾರೆ.