March 17, 2026

ಕೆಪಿಟಿ ಜಂಕ್ಷನ್ ನಲ್ಲಿ ಬೈಕ್ ಗೆ ಲಾರಿ ಢಿಕ್ಕಿ:
ವಗ್ಗ ನಿವಾಸಿ ಮೃತ್ಯು

0
Screenshot_2021-11-02-11-13-49-40_680d03679600f7af0b4c700c6b270fe7.jpg

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ರ ಕೆಪಿಟಿ ಜಂಕ್ಷನ್ ಬಳಿ ಅ.31ರ ಭಾನುವಾರ ಮಧ್ಯಾಹ್ನ ಬೈಕ್ ಗೆ ಲಾರಿ ಢಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.

ಮೃತರನ್ನು ಬೈಕ್ ಸವಾರ ಕಾರಿಂಜ ವಗ್ಗ ನಿವಾಸಿ ಪ್ರಶಾಂತ್ (37) ಎಂದು ಗುರುತಿಸಲಾಗಿದೆ. ಮಧ್ಯಾಹ್ನ 12 ಗಂಟೆಯ ವೇಳೆಗೆ ಪೆಅಶಾಂತ್ ಅವರು ಬೈಕ್ ನಲ್ಲಿ ಯೆಯ್ಯಾಡಿ ಕಡೆಯಿಂದ ಕೆ ಎಸ್ ಆರ್ ಟಿಸಿ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಲಾರಿ ಓವರ್ ಟೇಕ್ ಭರದಲ್ಲಿ ಬೈಕ್ ನ ಬಲಬದಿಯಲ್ಲಿ ಹ್ಯಾಂಡಲ್ ಗೆ ಢಿಕ್ಕಿಯಾಯಿತು.

ನಿಯಂತ್ರಣ ಕಳೆದುಕೊಂಡ ಪ್ರಶಾಂತ್ ರಸ್ತೆಗೆ ಬಿದ್ದು ಹಿಂಬದಿಯ ಚಕ್ರಕ್ಕೆ ಸಿಲುಕಿಕೊಂಡರು. ಬಳಿಕ ಲಾರಿ ಅವರನ್ನು ಹಲವು ಮೀಟರ್ ನಷ್ಟು ದೂರಕ್ಕೆ ಎಳೆದೊಯ್ದಿದಿತ್ತು.

Leave a Reply

Your email address will not be published. Required fields are marked *

You may have missed

error: Content is protected !!