March 17, 2026

ಸಿಂದಗಿ: ಬಿಜೆಪಿ ಕಾರ್ಯಕರ್ತನಿಗೆ ಲಾಟಿ, ಮಾರಕಾಸ್ತ್ರಗಳಿಂದ ಹಲ್ಲೆ

0
image_editor_output_image2134768617-1635833735591.jpg

ಸಿಂದಗಿ: ಬಿಜೆಪಿ ಕಾರ್ಯಕರ್ತರೊಬ್ಬರ ಲಾಟಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆ ಮಾಡುವ ಯತ್ನ ತಾಲೂಕಿನ ನಾಗಾವಿ ಬಿಕೆ ಗ್ರಾಮದಲ್ಲಿ ಮಂಗಳವಾರ ನಸುಕಿನ 5 ವೇಳೆಗೆ ನಡೆದಿದೆ.

ಗ್ರಾಮದ ಬಿಜೆಪಿ ಕಾರ್ಯಕರ್ತರ ಗುರಣ್ಣ ಸಿದ್ದನಗೌಡ ಬಿರಾದಾರ (30) ಮಂಗಳವಾರ ಬೆಳೆಗಳಿಗೆ ನೀರು ಬಿಡಲು ಹೊಲಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಗುರಣ್ಣನ ಮುಖಕ್ಕೆ ಬಟ್ಟೆ ಮುಚ್ಚಿ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗುರಣ್ಣನ ಕುತ್ತಿಗೆ ಮತ್ತು ಕಾಲಿಗೆ ಚಾಕುವಿನಿಂದ ಇರಿದಿದ್ದಾರೆ.ಕುತ್ತಿಗೆ ಮತ್ತು ಕಾಲಿಗೆ ಕೊಯ್ದ ರೀತಿಯಲ್ಲಿ ಗಾಯವಾಗಿವೆ. ಹಲ್ಲೆ ಮಾಡಿದ ಇಬ್ಬರೂ ಮುಖಕ್ಕೆ ಸ್ಕಾರ್ಫ್ ಸುತ್ತಿಕೊಂಡಿದ್ದರು. ಯಾವುದೇ ಮಾತನಾಡದೇ ಈ ಕೃತ್ಯ ಎಸಗಿದ್ದಾರೆ.

ಗುರಣ್ಣನಿಗೆ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಗೆ ಪೋಲಿಸರು ಬೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!