March 21, 2026

ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ ಶ್ರೀಲಂಕಾದ ನೆರವಿಗೆ ಧಾವಿಸಿದ ತಮಿಳುನಾಡು ಸರ್ಕಾರ

0
MK_Stalin_PTI.jpg

ಚೆನ್ನೈ: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾದ ನೆರವಿಗೆ ಧಾವಿಸಿರುವ ತಮಿಳುನಾಡು ಸರ್ಕಾರ, ಅಕ್ಕಿ, ಹಾಲಿನ ಪುಡಿ ಮತ್ತು ಜೀವರಕ್ಷಕ ಔಷಧಿಗಳನ್ನು ಕಳುಹಿಸಲು ಮುಂದಾಗಿದೆ.

ಈ ಕುರಿತು ಮಂಗಳವಾರ ಮಾಹಿತಿ ನೀಡಿರುವ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌, ಕೇಂದ್ರ ಸರ್ಕಾರದ ಅನುಮತಿ ಪಡೆದು ಮೊದಲ ಹಂತದಲ್ಲಿ ಅಕ್ಕಿ, ಹಾಲಿನ ಪುಡಿ, ಜೀವರಕ್ಷಕ ಔಷಧಿ ಕಳುಹಿಸಲಾಗುವುದು. ಸರ್ಕಾರದ ಈ ನೆರವಿಗೆ ಕೈ ಜೋಡಿಸಲು ಆಸಕ್ತರಿರುವ ನಾಗರಿಕರು ಕೂಡಾ ದೇಣಿಗೆ ನೀಡಬಹುದು ಎಂದು ತಿಳಿಸಿದ್ದಾರೆ.

ಕೊಲಂಬೊದ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ವಾಸವಾಗಿರುವ ಅಗತ್ಯ ವಸ್ತುಗಳನ್ನು ತಲುಪಿಸಲು ಅನುಮತಿ ನೀಡಬೇಕೆಂದು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಒತ್ತಾಯಿಸಿದ್ದರು

Leave a Reply

Your email address will not be published. Required fields are marked *

You may have missed

error: Content is protected !!