August 20, 2026

ಕಾಸರಗೋಡು: ಶವರ್ಮ ಸೇವನೆಯಿಂದ ವಿದ್ಯಾರ್ಥಿನಿ ಮೃತ್ಯು ಪ್ರಕರಣ: ಸಾವಿಗೆ ಬ್ಯಾಕ್ಟೀರಿಯಾ ಕಾರಣ: ಆರೋಗ್ಯಾಧಿಕಾರಿ

0
n3829415321651584706584eed3f6df78c77f452c3ade4fbc01da3f3a4a6c5fcd67ba530e820b227c321d22.jpg

ಕಾಸರಗೋಡು: ಚೆರ್ವತ್ತೂರಿನ ಕೂಲ್‌ಬಾರ್‌ನಲ್ಲಿ ಶವರ್ಮ ಸೇವಿಸಿದ ವಿದ್ಯಾರ್ಥಿನಿಯ ಸಾವಿಗೆ ಶಿಗಲ್ಲಾ ಬ್ಯಾಕ್ಟೀರಿಯಾ ಕಾರಣ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎ.ರಾಮದಾಸ್ ತಿಳಿಸಿದ್ದಾರೆ.

ವಿಷಾಹಾರ ಸೇವನೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿರುವವರ ರಕ್ತ ಮೊದಲಾದವುಗಳ ತಪಾಸಣೆಯಲ್ಲಿ ಶಿಗಲ್ಲಾ ಬ್ಯಾಕ್ಟೀರಿಯಾ ಪತ್ತೆಯಾಗಿದೆ.

ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗಿತ್ತು. ಇದರಿಂದ ಶಿಗಲ್ಲಾ ಬ್ಯಾಕ್ಟೀರಿಯಾ ಅಂಶ ಪತ್ತೆಯಾಗಿದ್ದು, ಜನರು ಇಂತಹ ಆಹಾರ ಸೇವಿಸುವ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!