May 15, 2026

ಇಬ್ಬರು ಅಪ್ರಾಪ್ತ ಬಾಲಕಿಯರು ಕೃಷಿ ಹೊಂಡಕ್ಕೆ ಬಿದ್ದು ನೀರುಪಾಲು

0
IMG-20220503-WA0027.jpg

ಗುಂಡ್ಲುಪೇಟೆ: ಪೇರಳೆ ಕೊಯ್ಯಲು ಹೋದ ಸಹೋದರಿಯರು ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕೆಬ್ಬೇಪುರ ಗ್ರಾಮದಲ್ಲಿ ನಿನ್ನೆ ನಡೆದಿದೆ.

8ನೇ ತರಗತಿ ವಿದ್ಯಾರ್ಥಿನಿ ಪೂಜಿತಾ (14) ಮತ್ತು 6ನೇ ತರಗತಿ ವಿದ್ಯಾರ್ಥಿನಿ ಪುಣ್ಯ (12) ಸಾವನ್ನಪ್ಪಿದ ದುರ್ದೈವಿ ಸಹೋದರಿಯರು.

ಬೆಳಗಿ ಉಪಾಹಾರ ಮುಗಿಸಿ ಹತ್ತಿರದ ಜಮೀನಿನಲ್ಲಿ ಪೇರಳೆ ಹಣ್ಣು ಕೀಳಲು ಮರದ ಮೇಲೆ ಹತ್ತಿದ್ದಾರೆ. ಆ ವೇಳೆ ಅಕಸ್ಮಾತ್ ಆಗಿ ಮರದ ಕೆಳಗೆ ಇದ್ದ ಕೃಷಿ ಹೊಂಡಕ್ಕೆ ಬಿದ್ದು ಮೇಲೆ ಬರಲು ಅಸಾಧ್ಯವಾಗಿ ಮುಳುಗಿ ಮೃತಪಟ್ಟಿದ್ದಾರೆ. ಈ ಮಕ್ಕಳ ಮೃತದೇಹಗಳನ್ನು ಹೊಂಡದಿಂದ ಮೇಲಕ್ಕೆತ್ತಲಾಗಿದೆ. ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Leave a Reply

Your email address will not be published. Required fields are marked *

error: Content is protected !!