ಕೊಡಂಗಾಯಿ: ದಿವಂಗತ ರಘುನಾಥ ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಸಭೆ
ವಿಟ್ಲ: ಶಿಲ್ಪ ಶ್ರೀ ಯುವಕ ಮಂಡಲ(ರಿ) ಕೊಡಂಗಾಯಿ ಇದರ ವತಿಯಿಂದ ಇತ್ತೀಚೆಗೆ ನಿಧನ ಹೊಂದಿದ ಯುವಕ ಮಂಡಲದ ಸ್ಥಾಪಕ ಕಾರ್ಯದರ್ಶಿಯಾದ ದಿವಂಗತ ರಘುನಾಥ ಶೆಟ್ಟಿ ಯವರಿಗೆ ಶಿಲ್ಪ ಶ್ರೀ ಯುವಕ ಮಂಡಲದ ಸ್ಥಾಪಕ ಸದಸ್ಯರಿಂದ ಹಾಗೂ ಪ್ರಸ್ತುತ ಸದಸ್ಯರಾಗಿರುವ* *ಯುವಕರು ಹಾಗೂ ಊರ ಭಾವೈಕ್ಯತಾ ನಾಗರಿಕರಿಂದ ಗ್ರಾಮ ಪಂಚಾಯತ್ ಸಭಾಭವನ ಕೊಡಂಗಾಯಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.

ಸಂಘದ ಸ್ಥಾಪಕ ಕೋಶಾಧಿಕಾರಿ ಶ್ರೀ ವಲ್ಲಭ ತಂತ್ರಿ* ಸ್ಥಾಪಕ ಹಿರಿಯ ಸದಸ್ಯರುಗಳಾದ ಶ್ರೀ ನಾರಾಯಣ ಭಟ್ ಪಳ್ಳಿ ಗದ್ದೆ ಶಶಿಕಾಂತ ಶೆಟ್ಟಿ, ಚಂಬರಡ್ಕಸಂಘದ ಮಾಜಿ ಅಧ್ಯಕ್ಷರಾದ ವಸಂತ ಶೆಟ್ಟಿ ಕಾಪುಕೋಡಿ ಶ್ರೀ ಉಮೇಶ್ ಶೆಟ್ಟಿ ತಾರಿಯಡ್ಕ ಸಂಘದ ಮಾಜಿ ಅಧ್ಯಕ್ಷರು ಶ್ರೀ ರವೀಶ್ ಶೆಟ್ಟಿ ಕರ್ಕಳ ಮುಂತಾದವರು ನುಡಿ ನಮನವನ್ನು ಸಲ್ಲಿಸಿದರು.
ಈ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಿದ ಪ್ರಸ್ತುತ ಸಂಘದ ಅಧ್ಯಕ್ಷರಾದ ಶ್ರೀ ರೋಹಿತ್ ರೈ ಚಂಬರಡ್ಕ ಕಾರ್ಯದರ್ಶಿ ಜಯರಾಮ್ ಗೌಡ ಮಾರುಗುಳಿ ಹಾಗೂ ಈ ಸೇರಿದ ಎಲ್ಲಾ ಸದಸ್ಯ ಮಿತ್ರರಿಗೆ ಶ್ರೀ ಬಿ ಸಂದೇಶ್ ಶೆಟ್ಟಿ ಬಿಕ್ನಾಜೆ ಧನ್ಯವಾದ ಸಮರ್ಪಿಸಿದರು.





