December 15, 2025

ಮಂಜೇಶ್ವರ: ಬೈಕ್ ಅಪಘಾತ: ಬೈಕ್ ಸವಾರ ಮುಹಮ್ಮದ್ ಹನೀಫ್

0
parking-lot-accidents-what-happens-if-your-insurance-lapses-and-you-have-an-accident-

ಮಂಜೇಶ್ವರ: ಬೈಕ್ ಮಗುಚಿ ಬಿದ್ದು ಸವಾರ ಮೃತಪಟ್ಟ ಘಟನೆ ಕುಂಬಳೆ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಆರಿಕ್ಕಾಡಿ ಬಳಿ ಶುಕ್ರವಾರ ನಡೆದಿದೆ. ಸಹ ಸವಾರ ಗಂಭೀರ ಗಾಯಗೊಂಡಿದ್ದಾರೆ.

ಕುಂಬಳೆ ಕೊಯಿಪಾಡಿ ಕಡಪ್ಪುರದ ಮುಹಮ್ಮದ್ ಹನೀಫ್ ( 45) ಮೃತಪಟ್ಟವರು. ಸಹ ಸವಾರರಾಗಿದ್ದ ಸಿರಾಜ್ ಗಂಭೀರ ಗಾಯಗೊಂಡಿದ್ದು, ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರಿನಲ್ಲಿ ಸಂಬಂಧಿಕರೋರ್ವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಈ ವೇಳೆಗೆ ಹನೀಫ್ ಮೃತಪಟ್ಟರು.
ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!